ಐದಕ್ಕೂ ಅಧಿಕ ಬೆಟ್ಟಿಂಗ್‌ ವೆಬ್‌ಸೈಟ್‌ಗಳನ್ನು ನಡೆಸುತ್ತಿದ್ದ ಕಾಂಗ್ರೆಸ್‌ ಶಾಸಕ

ಇ.ಡಿ ದಾಳಿಯಲ್ಲಿ ಶಾಸಕನ ಅಪಾರ ಸಂಪತ್ತಿನ ರಹಸ್ಯ ಬಯಲು

ಬೆಂಗಳೂರು: ಅಕ್ರಮ ಆನ್‌ಲೈನ್‌ ಬೆಟ್ಟಿಂಗ್ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಚಿತ್ರದುರ್ಗ ಚಳ್ಳಕೆರೆಯ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಐದಕ್ಕೂ ಹೆಚ್ಚು ಆನ್‌ಲೈನ್‌ ಬೆಟ್ಟಿಂಗ್‌ ವೆಬ್‌ಸೈಟ್‌ಗಳನ್ನು ನಡೆಸುತ್ತಿದ್ದುದನ್ನು ಜಾರಿ ನಿರ್ದೇಶನಾಲಯ (ಇ.ಡಿ) ಪತ್ತೆಹಚ್ಚಿದೆ. ಕಿಂಗ್ 567, ರಾಜ 567, ಲಯನ್ 567, ಪ್ಲೇ 567, ಪ್ಲೇವಿನ್ 567 ಎನ್ನುವ ಆನ್‌ಲೈನ್ ಬೆಟ್ಟಿಂಗ್ ವೆಬ್‌ಸೈಟ್ ನಡೆಸುತ್ತಿದ್ದರು ಎಂದು ಇ.ಡಿ. ಬಹಿರಂಗಪಡಿಸಿದೆ.

ವೀರೇಂದ್ರ ಪಪ್ಪಿ ಆನ್‌ಲೈನ್‌ ಬೆಟ್ಟಿಂಗ್‌ ಮೂಲಕ ಅಪಾರ ಹಣ ಸಂಪಾದಿಸಿದ್ದರು. ಅವರ ಬೃಹತ್‌ ಚಿನ್ನದ ಖಜಾನೆಯನ್ನು ಇ.ಡಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಇ.ಡಿ ಅಧಿಕಾರಿಗಳು ದಾಳಿ ನಡೆಸಿ ವೀರೇಂದ್ರ ಪಪ್ಪಿಗೆ ಸೇರಿದ ಎಲ್ಲ ಬ್ಯಾಂಕ್ ಲಾಕರ್‌ಗಳನ್ನು ಪರಿಶೀಲನೆ ಮಾಡಿದ್ದು, ಈ ವೇಳೆ ಒಟ್ಟು 24 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳು ಪತ್ತೆಯಾಗಿವೆ. ಒಟ್ಟಾರೆ 100 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ಇ.ಡಿ ದೃಢಪಡಿಸಿದ್ದು, ಕಾರು ಎಷ್ಟು, ಚಿನ್ನ, ಬೆಳ್ಳಿ ಎಷ್ಟು ಸಿಕ್ಕಿದೆ ಎನ್ನುವ ಮಾಹಿತಿಯನ್ನು ಸಹ ಬಹಿರಂಗಪಡಿಸಿದೆ.





















































 
 

ನಿಷೇಧಿತ ಆನ್​ಲೈನ್ ಬೆಟ್ಟಿಂಗ್ ವಂಚನೆ ಆರೋಪದಡಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಸೇರಿದಂತೆ ಹಲವೆಡೆ ಇ.ಡಿ ದಾಳಿಯಾಗಿತ್ತು. ದಾಳಿಯಲ್ಲಿ 24 ಕ್ಯಾರಟ್‌ನ ​ 21.43 ಕೆಜಿ ಚಿನ್ನದ ಬಿಸ್ಕೆಟ್ ಸಿಕ್ಕಿತ್ತು. ಕೆ.ಸಿ.ವೀರೇಂದ್ರ ಪಪ್ಪಿ ಮನೆಯಲ್ಲಿ 1 ಕೆಜಿ ಚಿನ್ನಾಭರಣ ಪತ್ತೆಯಾಗಿತ್ತು. ಚಿನ್ನ ಲೇಪಿತ 10 ಕೆಜಿ 985 ಗ್ರಾಮ್ ಬೆಳ್ಳಿಗಟ್ಟಿ ಸೇರಿದಂತೆ ಒಟ್ಟು 24 ಕೋಟಿ ರೂ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಪತ್ತೆಯಾಗಿವೆ ಎಂದು ಇಡಿ ಖಚಿತಪಡಿಸಿದೆ.

ದಾಳಿಯಲ್ಲಿ ಆನ್‌ಲೈನ್ ಬೆಟ್ಟಿಂಗ್ ನಡೆಸಿರುವುದು ಇ.ಡಿ ಪತ್ತೆ ಹಚ್ಚಿದೆ. ಕಿಂಗ್ 567, ರಾಜ 567, ಲಯನ್ 567, ಪ್ಲೇ 567, ಪ್ಲೇವಿನ್ 567 ಎಂಬ ಆನ್‌ಲೈನ್ ಬೆಟ್ಟಿಂಗ್ ವೆಬ್‌ಸೈಟ್‌ಗಳನ್ನು ನಡೆಸುತ್ತಿದ್ದದ್ದು ಕಂಡುಬಂದಿದೆ. ಈ ವೆಬ್‌ಸೈಟ್‌ಗಳ ಮೂಲಕ ಬಂದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವುದನ್ನು ಸಹ ಇ.ಡಿ ಕಂಡುಹಿಡಿದಿದೆ. ಅಕ್ರಮವಾಗಿ ಹಣ ವರ್ಗಾವಣೆ ಮಾಡಿ ಕೋಟ್ಯಾಂತರ ರೂ. ಮೌಲ್ಯದ ಅಂತಾರಾಷ್ಟ್ರೀಯ ಪ್ರವಾಸ ಟಿಕೆಟ್‌ಗಳ ಖರೀದಿ ಹಾಗೂ ಮ್ಯೂಲ್ ಖಾತೆಗಳಿಂದ ಹಣ ಹಂಚಿಕೆ ಆಗಿದ್ದ ಬಗ್ಗೆ ಇಡಿ ಸಾಕ್ಷಿ ಕಲೆಹಾಕಿದೆ.

ದಾಳಿ ವೇಳೆ ವೀರೇಂದ್ರ ಪಪ್ಪಿ ಕುಟುಂಬ ಬಳಸುತ್ತಿದ್ದ ಲಕ್ಸುರಿ ಕಾರುಗಳನ್ನು ಸಹ ಇಡಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಬೇರೆ ವ್ಯಕ್ತಿಗಳು ಮತ್ತು ಸಂಸ್ಥೆಗಳ ಹೆಸರಿನಲ್ಲಿ ಕಾರು ನೋಂದಣಿ ಮಾಡಿರುವುದು ಪತ್ತೆಯಾಗಿದೆ. ಅನಿಲ್ ಗೌಡ ಎಂಬುವರ ಹೆಸರಿನಲ್ಲಿ ಬೆಂಜ್, ಫೋನೊಫೆಸಿಯಾ ಕಂಪನಿಯ ಗುಲ್ಯಾನ್ ಖತ್ತರ್ ಹಣ ಹಾಕಿರುವ ರೇಂಜ್ ರೋವರ್ ಕಾರು ಸಹ ಸಿಕ್ಕಿದೆ. ದಾಳಿಯಲ್ಲಿ ಒಟ್ಟಾರೆ 100 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ಇಡಿ ಮಾಧ್ಯಮ ಪ್ರಕಟಣೆ ಮೂಲಕ ದೃಢಪಡಿಸಿದೆ.

error: Content is protected !!
Scroll to Top