ಪುತ್ತೂರು: ಪುತ್ತೂರು ಕರ್ನಾಟಕ ರಾಜ್ಯ ಭಾವೈಕ್ಯತಾ ಪರಿಷತ್ ಸಾಧಕರಿಗೆ ನೀಡುವ ಸಮಾಜ ರತ್ನ ಪ್ರಶಸ್ತಿಗೆ ಉದ್ಯಮಿ ಸಮಾಜ ಸೇವಕ ಡಾ. ಹರ್ಪ ಕುಮಾರ್ ರೈ ಮಾಡವು ಈ ಬಾರಿಗೆ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಗೌರವಾಧ್ಯಕ್ಷ ನಿವೃತ್ತ ಡಿ.ಸಿ.ಪಿ.ಜಿಎ ಬಾವಾ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ 14 ರಂದು ಮಂಗಳೂರಿನ ದೇರಳಕಟ್ಟೆಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿಯಲ್ಲಿ ಸನ್ಮಾನ್ಯ ಸ್ಪೀಕರ್ ಯು.ಟಿ ಖಾದರ್ ರವರ ಸಮ್ಮುಖದಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ ಎಂದು ತಿಳಿಸಿರುತ್ತಾರೆ.
ಡಾ. ಹರ್ಷ ಕುಮಾರ್ ರೈ ಹಲವು ಉದ್ಯಮಗಳನ್ನುನಡೆಸಿಕೊಂಡು ಬರುತ್ತಿದ್ದು ಹಲವು ಸಂಘ ಸಂಸ್ಥೆಗಳ ಸಾರಥ್ಯವನ್ನು ವಹಿಸಿದ್ದಾರೆ. ಅವರ ಸಮಾಜ ಮುಖಿ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ
























