ಇನ್ನೆಷ್ಟು ದಿನ ಮತಗಳಿಕೆಗಾಗಿ ಸುಳ್ಳಿನ ಭರಾಟೆ ಎಂದು ಪ್ರಶ್ನಿಸಿದ ರವಿ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎರಡು ದಿನದ ಹಿಂದೆಯಷ್ಟೇ ಹಾಡಿ ಹೊಗಳಿದ ಶಾಂತಿದೂತರು ಮಂಡ್ಯದ ಮದ್ದೂರಿನಲ್ಲಿ ಗಣಪತಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪರಿಷತ್ ಸದಸ್ಯ ಸಿಟಿ ರವಿ ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯನವರನ್ನು ತರಾಟೆಗೆ ತೆಗೆದುಕೊಂಡಿರುವ ಸಿ.ಟಿ.ರವಿ, ಮಾನ್ಯ ಮುಖ್ಯಮಂತ್ರಿಗಳೇ ನೀವು ಎರಡು ದಿನದ ಹಿಂದೆ ಹಾಡಿ ಹೊಗಳಿದ “ಶಾಂತಿದೂತರು” ಮಂಡ್ಯದ ಮದ್ದೂರಿನಲ್ಲಿ ಗಣಪತಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಸಾಗರದಲ್ಲಿ ಗಣಪತಿಯ ವಿಗ್ರಹಕ್ಕೆ ಉಗುಳುವ ಹೀನ ಕೆಲಸ ಮಾಡಿದ್ದಾರೆ. ಜಾಗತಿಕ ಭಯೋತ್ಪಾದನೆಗೆ ದೊಡ್ಡ ಕೊಡುಗೆ ಕೊಟ್ಟವರು, ನೀವು ಹೊಗಳಿದ ಶಾಂತಿದೂತರೆ.
ಭರತ ಖಂಡದಲ್ಲಿ ಹಿಂದೂಗಳ ಮಾರಣಹೋಮಕ್ಕೆ ಕಾರಣರಾದವರು ನೀವು ಹೊಗಳಿದ ಶಾಂತಿದೂತರೆ. ಭಾರತವನ್ನು ವಿಭಜಿಸುವ ಮೂಲಕ ಅಖಂಡ ಭಾರತವನ್ನು ತುಂಡರಿಸಿದವರು ನೀವು ಹೊಗಳಿದ ಶಾಂತಿದೂತರೆ. ಕಾಶ್ಮೀರದಲ್ಲಿ ಭಾರತದ ರಾಷ್ಟ್ರೀಯ ಲಾಂಛನ ʼಅಶೋಕಚಕ್ರʼವನ್ನು ಒಡೆದು ಹಾಕಿದವರು ನೀವು ಹೊಗಳಿದ ಶಾಂತಿದೂತರೆ. ನೆನಪಿಡಿ ಈ ನಿಮ್ಮ ಶಾಂತಿದೂತರನ್ನು ನಂಬಿಕೊಂಡಿದ್ದರೆ ಮುಂದೊಂದು ದಿನ ದೇಶದಲ್ಲಿ ʼಸಂವಿಧಾನʼದ ಬದಲಿಗೆ ʼಷರಿಯಾʼ ಆವರಿಸಿಕೊಂಡೀತು. ರಾಷ್ಟ್ರಧ್ವಜ ಮತ್ತು ರಾಷ್ಟ್ರಲಾಂಛನವನ್ನು ಗೌರವಿಸಲಾರದವರು ಸಂವಿಧಾನವನ್ನು ಉಳಿಸಿಯಾರೆ?
ಇನ್ನೆಷ್ಟು ದಿನ ಮತಗಳಿಕೆಗಾಗಿ ಸುಳ್ಳಿನ ಭರಾಟೆ? ಸತ್ಯ ಹೇಳಿ ಜನಜಾಗೃತಿ ಮೂಡಿಸಿ. ಆಗಲಾದರೂ ಜನರಿಗೆ ಶಾಂತಿದೂತರ ಹೀನ ಕೃತ್ಯ ಅರ್ಥವಾದೀತು. ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತವಾದರೂ ಆದೀತು ಎಂದಿದ್ದಾರೆ.
























