ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಇಂದು SIT ವಿಚಾರಣೆಗೆ ಹಾಜರಾಗಿದ್ದ ಜಯಂತ್ ಮಾಧ್ಯಮಗಳ ಕೆಮರಾ ಕಂಡು ಬೇರೊಂದು ಕಾಡು ಹಾದಿಯಲ್ಲಿ ಓಡಿ ಹೋದ ಘಟನೆ ನಡೆದಿದೆ.
SIT ಅಧಿಕಾರಿಗಳ ಬುಲಾವ್ ಮೇರೆಗೆ ವಿಚಾರಣೆಗೆ ಆಗಮಿಸಿದ್ದ ಜಯಂತ್, ಆ ಬಳಿಕ ಮಾಧ್ಯಮಗಳನ್ನು ಕಂಡು ಕಚೇರಿಯ ಹಿಂದಿನ ದಾರಿಯಲ್ಲಿ ಓಡಿ ಹೋಗಿದ್ದು, ಇದು ಸಾರ್ವಜನಿಕ ವಲಯದಲ್ಲಿ ಜಯಂತ್ ಅವರ ಮೇಲೆ ಮತ್ತಷ್ಟು ಅನುಮಾನ ಹುಟ್ಟುವಂತೆ ಮಾಡಿದೆ.
ಅವರು ಮಾಧ್ಖಮಗಳನ್ನು ಕಂಡ ತಕ್ಷಣ ಯಾತಕ್ಕಾಗಿ ಓಡಿದ್ದಾರೆ. ಬುರುಡೆ ಷಡ್ಯಂತ್ರದ ಹಿಂದಿರುವ ಕೈಗಳ ವಿಚಾರಣೆಯನ್ನು SIT ಅಧಿಕಾರಿಗಳು ಇಂದು ನಡೆಸಿದ್ದು, ಪ್ರಕರಣದಲ್ಲಿ ಹೆಸರು ಕೇಳಿ ಬಂದಿದ್ದ ಜಯಂತ್ ಅವರನ್ನೂ ವಿಚಾರಣೆಗೆ ಕರೆಯಲಾಗಿತ್ತು. ಈ ಹಿನ್ನೆಲೆ ಅವರು SIT ಕಚೇರಿಗೆ ಬಂದಿದ್ದರು.
























