ಪುತ್ತೂರು ಐಕ್ಯ ಕಲಾ-ಸೇವಾ ಟ್ರಸ್ಟ್ ನ ವಾರ್ಷಿಕ ಮಹಾಸಭೆ ರೋಟರಿ ಸಭಾಭವನದಲ್ಲಿ ನಡೆಯಿತು.

ಪುತ್ತೂರಿನ ಖ್ಯಾತ ವೈದ್ಯರು ಹಾಗೂ ಸಂಪ್ಯ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ಸುರೇಶ್ ಪುತ್ತೂರಾಯ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಈ ಒಂದು ಯುವಕರ ತಂಡ ಇನ್ನಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುವುದರ ಮೂಲಕ ಪುತ್ತೂರಿನಲ್ಲಿ ಮಾತ್ರವಲ್ಲದೆ ಹತ್ತೂರಲ್ಲೂ “ಐಕ್ಯ ಕಲಾ-ಸೇವಾ ಟ್ರಸ್ಟ್” ನ ಹೆಸರು ಹರಡಬೇಕೆಂದು ಶುಭ ಹಾರೈಸಿದರು.
ಜೆಸಿಐ ತರಬೇತುದಾರ ದಾಮೋದರ ಪಾಟಾಳಿ ಅವರಿಂದ “ವ್ಯಕ್ತಿತ್ವ ವಿಕಸನ, ನಾಯಕತ್ವ, ಟ್ರಸ್ಟ್ ನ ಜವಾಬ್ದಾರಿ”ಗಳ ಮಾಹಿತಿ ತರಬೇತಿ ಕಾರ್ಯಗಾರ ನಡೆಯಿತು.
ಅಧ್ಯಕ್ಷ ಚೇತನ್ ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ದಕ್ಷಿತ್ ಎಸ್ ಯಂ. ವರದಿ ವಾಚಿಸಿದರು. ಕಾರ್ತಿಕ್ ಕೆ. ಲೆಕ್ಕಪತ್ರ ಮಂಡಿಸಿದರು.
ಈ ಸಂದರ್ಭದಲ್ಲಿ 2025-26 ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸಚಿನ್ ಕುಮಾರ್, ಉಪಾಧ್ಯಕ್ಷರಾಗಿ ಪ್ರಿಯಾಂಕ ಮೋಹನ್, ಕಾರ್ಯದರ್ಶಿಯಾಗಿ ಅಭಿಷೇಕ್ ಶೆಟ್ಟಿ,, ಜೊತೆ ಕಾರ್ಯದರ್ಶಿಯಾಗಿ ಕಾವ್ಯ ಮಿಥುನ್, ಖಜಾಂಜಿಯಾಗಿ ಕಾರ್ತಿಕ್ ಕೆ, ಲೆಕ್ಕಪರಿಶೋಧಕರಾಗಿ ದಕ್ಷಿತ್ ಎಸ್ ಎಂ, ಸಂಚಾಲಕರಾಗಿ ಉತ್ತೇಶ್ ಬಿ, ಅವಿನಾಶ್ ವಿ.ಆರ್. ಅವರುಗಳನ್ನು ಆಯ್ಕೆ ಮಾಡಲಾಯಿತು.
























