ಕೆಂಪುಕೋಟೆಯಿಂದ ಬಂಗಾರದ ಕಲಶ ಕದ್ದ ಆರೋಪಿ ಅಂದರ್

ನವದೆಹಲಿ: ಕೆಂಪು ಕೋಟೆಯ ಪರಿಸರದಲ್ಲಿ ನಡೆದ ಜೈನರ ಧಾರ್ಮಿಕ ಕಾರ್ಯಕ್ರಮದಲ್ಲಿ ಎರಡು ಚಿನ್ನದ ಕಲಶಗಳನ್ನು ಕದ್ದೊಯ್ದ ಆರೋಪಿಯನ್ನು ಉತ್ತರ ಪ್ರದೇಶದ ಅಪರಾಧ ವಿಭಾಗದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತನನ್ನು ಹಾಪುರ್‌ನ ನಿವಾಸಿ ಭೂಷಣ್ ವರ್ಮಾ ಎಂದು ಗುರುತಿಸಲಾಗಿದೆ.

ಭೂಷಣ್ ಜೈನರ ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ಎರಡು ಬಂಗಾರದ ಕಲಶಗಳನ್ನು ಎಗರಿಸಿದ್ದ. ಜೈನ ಅರ್ಚಕನ ವೇಷದಲ್ಲಿ ಬಂದು ಆರೋಪಿ ಈ ಕುಕೃತ್ಯ ಎಸಗಿದ್ದ. ಈ ದೃಶ್ಯ ಸಿಸಿಟಿವಿ ಮತ್ತು ಸಾಮಾಜಿಕ ಜಾಲತಾಣದಲ್ಲೂ ‌ವೈರಲ್ ಆಗಿದೆ.





















































 
 

error: Content is protected !!
Scroll to Top