13 ಪೇಜ್‌ಗಳಲ್ಲಿ ಅವಮಾನಕಾರಿ ಸಂದೇಶ ಪೋಸ್ಟ್ ಎಂದು ಆರೋಪ
ಬೆಳ್ತಂಗಡಿ: ತನ್ನ ವಿರುದ್ದ ಹಾಗೂ ಸೌಜನ್ಯಾ ಪರ ಹೋರಾಟಗಾರರ ವಿರುದ್ಧ ಅಶ್ಲೀಲವಾದ ಬರಹ, ಮಾನಹಾನಿಕರವಾದ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕುತ್ತಿರುವ ಕುರಿತು ಸೌಜನ್ಯಾ ತಾಯಿ ಕುಸುಮಾವತಿ ಸಾಮಾಜಿಕ ಜಾಲತಾಣದ 13 ಖಾತೆಗಳ ವಿರುದ್ಧ ದೂರು ನೀಡಿದ್ದು, ಅದರಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕುಸುಮಾವತಿ ಅವರು ಸಾಮಾಜಿಕ ಜಾಲತಾಣದಲ್ಲಿನ 13 ಪೇಜ್‌ಗಳ ವಿರುದ್ಧ ದೂರು ನೀಡಿದ್ದಾರೆ. ಅದರಂತೆ ಶುಭಾ ರೈ, ಯಶವಂತ ಗಟ್ಟಿ ಕೊಕ್ಕಡ, ದೀಪಕ್ ಶೆಟ್ಟಿ ಬೆಂಗಳೂರು, ಸರಸ್ವತಿ ಅಮಿತ್ ಬಜ್ಪೆ, ಅಮಿತ್ ಬಜ್ಪೆ, ಅನುಶೆಟ್ಟಿ, ನವೀನ್ ಗೌಡ, ಜೈ ಕುಂಜ್ಞಪ್ಪ, ವೈ.ಎಂ.ಅಡ್ಮಿನ್, ಟ್ರೋಲ್ ಬಾಹುಬಲಿ, ರಾಜೇಶ್ ನಾಯ್ಕ್, Instagram ಅಕೌಂಟ್ ಟ್ರೋಲ್ ತಿಮ್ಮರೌಡಿ, ಶೆಟ್ಟಿ ತನುಷ್ ಎಂಬ ಖಾತೆಗಳ ವಿರುದ್ಧ ದೂರು ನೀಡಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಗೆ ಸೆ.4 ರಂದು ಕುಸುಮಾವತಿ ನೀಡಿದ ದೂರಿನ ಮೇರೆಗೆ BNS-2023(u/s-79,296) ಅಡಿಯಲ್ಲಿ 13 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಫೇಸ್‌ಬುಕ್‌ನಲ್ಲಿ ನಿರಂತರವಾಗಿ ಕುಸುಮಾವತಿ ಹಾಗೂ ಇವರ ಜೊತೆ ನ್ಯಾಯಪರ ಹೋರಾಟದಲ್ಲಿ ತೊಡಗಿಕೊಂಡಿದ್ದ ಸೌಜನ್ಯಾ ಪರ ಹೋರಾಟಗಾರರ ಫೋಟೋಗಳನ್ನು ಮಾರ್ಪ್ ಮಾಡಿ ಅಶ್ಲೀಲವಾಗಿ ಬರೆದು ಮಾನಕ್ಕೆ ಹಾನಿಯಾಗುವ ರೀತಿಯಲಿ ವಿದ್ಯುನ್ಮಾನ ಸಾಧನದ ಮೂಲಕ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ಹಾಗೂ Instagramನಲ್ಲಿ 1.8.2024ರಿಂದ 3.9.2025ರ ಮಧ್ಯದ ಅವಧಿಯಲ್ಲಿ ನಿರಂತರವಾಗಿ ಹರಿಯಟ್ಟಿರುವುದನ್ನು ಕುಸುಮಾವತಿ ಅವರು ತನ್ನ ತಮ್ಮ ಪುರಂದರ ಗೌಡ ಅವರ ಮೊಬೈಲ್‌ನಲ್ಲಿ ನೋಡಿರುವುದಾಗಿ ಎಂದು ದೂರಿನಲ್ಲಿ ತಿಳಿಸಿದ್ದಾರೆ.
























