ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ(ರಿ) ಪುತ್ತೂರು ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಅವರ 171 ನೇ ಜನ್ಮ ದಿನಾಚರಣೆ ಸೆ. 7 ರಂದು ಪುತ್ತೂರಿನ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಕಲಾಮಂದಿರದಲ್ಲಿ ನಡೆಯಲಿದೆ.
ಗಣ ಹೋಮ, ಗುರು ಪೂಜೆ, ಭಜನೆ, ಸಭಾ ಕಾರ್ಯಕ್ರಮ ನಡೆಯಲಿದ್ದು, ಭಗೀರಥ ಜಿ. (ಅಧ್ಯಕ್ಷರು ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ನಿ. ಬೆಳ್ತಂಗಡಿ), ಸದಾನಂದ ಪೂಜಾರಿ (ಅಧ್ಯಕ್ಷರು ಸಂಸ್ಥಾಪಕರು, ನಂದಾದೀಪ ಫೌಂಡೇಶನ್ ಮತ್ತು ಬಿಲ್ಲವ ಬ್ರಿಗ್ರೇಡ್ (ರಿ.) ಕೇಂದ್ರಿಯ ಮಂಡಳಿ ಮಂಗಳೂರು), ಕ್ಯಾ! ಚಿದಾನಂದ ನಾಡಾಜೆ (ಹಿರಿಯ ಸದಸ್ಯರು ಸ್ಥಾಪಕ ಸಂಚಾಲಕರು, ವಿದ್ಯಾನಿಧಿ ಬಿಲ್ಲವ ಸಂಘ, ಪುತ್ತೂರು) ಇವರಿಗೆ ಸನ್ಮಾನ ನಡೆಯಲಿದೆ.
ಉದ್ಘಾಟನೆಯನ್ನು ಹಿರಿಯ ಪತ್ರಕರ್ತ, ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ನಿರ್ವಹಿಸಲಿದ್ದಾರೆ. ಬ್ರಹ್ಮಶ್ರೀ ಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ (ರಿ.), ಪುತ್ತೂರು ಇದರ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ, ಗೌರವಾರ್ಪಣೆ, ಅಭಿನಂದನೆ ನಡೆಯಲಿದ್ದು, ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯ ಬಾಂಧವರು ಆಗಮಿಸುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
























