ಪ್ರೇಮಲತಾ ರೈ ಅವರಿಗೆ ಎವಿಜಿ ಸ್ಕೂಲ್’ನಲ್ಲಿ ಗುರುವಂದನೆ

ಪುತ್ತೂರು: ಬನ್ನೂರಿನ ಅಲುಂಬುಡದಲ್ಲಿರುವ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಗುರುವಂದನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲೆಯವರಾದ ಶ್ರೀಮತಿ ಪ್ರೇಮಲತಾ ರೈ ಅವರನ್ನು ಮನೋಜ್ಞವಾಗಿ ಸನ್ಮಾನಿಸಲಾಯಿತು.

ಎ ವಿ ನಾರಾಯಣ ಅವರು ಗುರು ವಂದನೆ ಸ್ವೀಕರಿಸಿದ ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ ಪ್ರೇಮಲತಾ ರೈ ಅವರನ್ನು ಪರಿಚಯಿಸಿ ಗುರುಗಳ ಮಹತ್ತ್ವವನ್ನು ವಿಶದಪಡಿಸಿದರು. ಬಳಿಕ ತಮ್ಮ ಧರ್ಮಪತ್ನಿ ಪ್ರತಿಭಾದೇವಿ ಮತ್ತು ಮಗಳು ಜ್ಯೋತ್ಸ್ನಾರೊಂದಿಗೆ ಗುರುವಂದನೆ ಸಲ್ಲಿಸಿದರು.

ಒಂದಕ್ಷರ ಕಲಿಸಿದವರು ಸಹ ಗುರುಗಳು
ಕಾರ್ಯಕ್ರಮವನ್ನು ಉದ್ಘಾಟನೆಗೈದು ಗುರುವಂದನೆ ಸ್ವೀಕರಿಸಿದ ಶ್ರೀಮತಿ ಪ್ರೇಮಲತಾ ರೈ ಅವರು ಮಾತನಾಡಿ ಸರ್ವೆಪಲ್ಲಿ ರಾಧಾಕೃಷ್ಣ ಅವರ ಜೀವನ ಮೌಲ್ಯಗಳನ್ನು ಮನಮುಟ್ಟುವಂತೆ ವಿವರಿಸಿ ನಾವು ಜೀವನದಲ್ಲಿನ ಯಾವುದೇ ಗುರಿ ಮುಟ್ಟಲು ಶಿಕ್ಷಣ ಅತಿ ಅವಶ್ಯಕ ಎಂದರು. ಯಾವುದೇ ಒಂದು ಸಣ್ಣ ವಿಚಾರವನ್ನು ತಿಳಿಸಿದವರು ಗುರುಗಳು ಎಂದು ನಾವು ನಂಬಿದರೆ ನಮ್ಮ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಕಿವಿಮಾತು ಹೇಳಿದರು. ಇಂದು ಎ.ವಿ. ನಾರಾಯಣ ದಂಪತಿಗಳು ನೀಡಿದ ಗುರುವಂದನೆ ಸಮಾಜಕ್ಕೆ ಮಾದರಿಯಾಗಿದೆ ಎಂದರು.





















































 
 

ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಮಾದರಿ ಸಂಸ್ಥೆ
ಮುಖ್ಯ ಅತಿಥಿಯವರಾದ ಮಹಾಲಿಂಗೇಶ್ವರ ಐಟಿಐನ ನಿವೃತ್ತ ಪ್ರಾಂಶುಪಾಲರಾದ ಭವಾನಿಶಂಕರ ಪರಂಗಾಜೆ ಮಾತನಾಡಿ ಈ ಶಾಲೆಯ ಶಿಸ್ತು ಮತ್ತು ಹಸಿರ ಪರಿಸರದ ವಾತಾವರಣವು ಆಧುನಿಕ ಕಾಲದ ಗುರುಕುಲದಂತೆ ಇದೆ ಎಂದರು. ಎ.ವಿ. ನಾರಾಯಣ ಅವರ ವ್ಯಕ್ತಿತ್ವವು ಯುವಜನಾಂಗಕ್ಕೆ ಮಾದರಿಯಾದುದು ಎಂದು ಶ್ಲಾಘಿಸಿದರು. ಶಿಕ್ಷಕರು ಎಲ್ಲಾ ಆಯಾಮಗಳಲ್ಲಿಯೂ ಮಾದರಿಯಾಗಿರಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಸಭಾಧ್ಯಕ್ಷತೆ ವಹಿಸಿದ್ದ ಶಾಲಾಡಳಿತ ಮಂಡಳಿಯ ಅಧ್ಯಕ್ಷ ಕಳುವಾಜೆ ವೆಂಕಟ್ರಮಣ ಗೌಡರು ಮಾತನಾಡಿ ಗುರುಭ್ಯೋ ನಮಃ ಎನ್ನುವುದು ನಮ್ಮ ಸನಾತನ ಪರಂಪರೆಯಾಗಿದೆ ಎಂದರು. ಎಂದರು

ಪ್ರಾಂಶುಪಾಲರಾದ ಅಮರನಾಥ್ ಪಟ್ಟೆ ಕಾರ್ಯಕ್ರಮವನ್ನು ಸುಂದರವಾಗಿ ಆಯೋಜಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ ನಿಜವಾದ ಶಿಕ್ಷಕ ಎಂದರೆ ನಿರಂತರ ಕಲಿಕೆ ಮಾಡುವವನು ಎಂದರು. 5ನೆ ತರಗತಿಯ ಅನೂಪ್ ರಾಜ್ ಶಿಕ್ಷಕರಿಗೆ ಅಭಿನಂದನ ಭಾಷಣ ಸಲ್ಲಿಸಿದರು. ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷೆ ಸೌಮ್ಯಶ್ರೀ ಹೆಗ್ಡೆ ಶುಭ ಹಾರೈಸಿದರು.

ಶಿಕ್ಷಕರಿಗೆ ವಿದ್ಯಾರ್ಥಿಗಳಿಂದ ಗೌರವ ಸಮರ್ಪಣೆ
ಶಿಕ್ಷಕರಿಗಾಗಿ ವಿವಿಧ ಮನೋಲ್ಲಾಸಕರ ಆಟಗಳನ್ನು ಆಯೋಜಿಸಿದ್ದ ವಿದ್ಯಾರ್ಥಿಗಳು ಅವರಿಗೆ ಬಹುಮಾನಗಳನ್ನು ನೀಡಿ ಸಂಭ್ರಮಿಸಿ ಆಶೀರ್ವಾದ ಪಡೆದರು.

ಆಡಳಿತ ಮಂಡಳಿಯ ನಿರ್ದೇಶಕರಾದ ಪುಷ್ಪಾವತಿ ಕಳುವಾಜೆ, ಉಪಾಧ್ಯಕ್ಷರಾದ ಉಮೇಶ್ ಮಳುವೇಲು ಮತ್ತು ಆಡಳಿತಾಧಿಕಾರಿ ಗುಡ್ಡಪ್ಪ ಗೌಡ ಬಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

3ನೆ ತರಗತಿಯ ಅದ್ವಿತಿ ಬಂಜನ್ ಸ್ವಾಗತಿಸಿ 5ನೆ ತರಗತಿಯ ಧನ್ವಿತ್
ಧನ್ಯವಾದ ಸಲ್ಲಿಸಿದರು. 5ನೆ ತರಗತಿಯ ವಿಖ್ಯಾತ್ ಸಂವಿಧಾನದ ಪೀಠಿಕೆ ವಾಚಿಸಿದರು. 6ನೆ ತರಗತಿಯ ಅದ್ವಿಕ್ ಬಂಜನ್ ಮತ್ತು 4ನೆ ತರಗತಿಯ ಜ್ಯೋತ್ಸ್ನಾ ಎ. ಎನ್. ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top