ಹಾಸನ: ರಾಷ್ಟ್ರ ರಕ್ಷಣಾ ಸೇನೆಯು ಬುಕರ್ ಪ್ರಶಸ್ತಿ ಪಡೆದ ಲೇಖಕಿ ಬಾನು ಮುಷ್ತಾಕ್ ಅವರನ್ನು ಭೇಟಿ ಮಾಡಿ, ನಾಡ ಹಬ್ಬ ದಸರಾ ಉದ್ಘಾಟನೆಗೆ ರಾಜ್ಯ ಸರ್ಕಾರ ನೀಡಿದ ಆಹ್ವಾನವನ್ನು ತಿರಸ್ಕರಿಸುವಂತೆ ಮನವಿ ಮಾಡಿದೆ.
ಸಂಘಟನೆಯ ಸದಸ್ಯರು ಬಾನು ಮುಷ್ತಾಕ್ ನಿವಾಸಕ್ಕೆ ತೆರಳಿ, ಅವರು ದಸರಾ ಉದ್ಘಾಟನೆ ಮಾಡುವುದಕ್ಕೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ವಿರೋಧ ಇರುವುದರಿಂದ ಈ ಆಹ್ವಾನ ತಿರಸ್ಕರಿಸುವಂತೆ ಲಿಖಿತ ಮನವಿ ಮಾಡಿದ್ದಾರೆ.
ಈ ಹಿಂದೆ ಭುವನೇಶ್ವರಿ ಅವರನ್ನು ಮುಷ್ತಾಕ್ ವಿರೋಧಿಸಿ ಮಾತನಾಡಿದ್ದರು. ದಸರಾ ಹಿಂದೂಗಳ ಹಬ್ಬ. ಹಿಂದೂ ಸಂಪ್ರದಾಯ ಒಪ್ಪದ ನೀವು ದಸರಾ ಉದ್ಘಾಟನೆ ಮಾಡಬಾರದು ಎಂದು ಸಂಘಟನೆ ಹೇಳಿದೆ. ಆದರೆ ಸಂಪ್ರದಾಯಗಳಿಗೆ ನೋವಾಗದಂತೆ ದಸರಾ ಉದ್ಘಾಟನೆ ಮಾಡುವುದಾಗಿ ಬಾನು ಮುಷ್ತಾಕ್ ತಿಳಿಸಿದ್ದಾರೆ.
























