ಪುತ್ತೂರು: ನರಿಮೊಗರು ಗ್ರಾಮ ಪಂಚಾಯಿತಿ ಹಾಗೂ ನರಿಮೊಗರು ಶ್ರೀ ದುರ್ಗಾ ಸಂಜೀವಿನಿ ಜಿಪಿಎಲ್ ಎಫ್ ವತಿಯಿಂದ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಯೋಗದಲ್ಲಿ ಬೃಹತ್ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ ಹಾಗೂ ವಿಶೇಷ ಅಪಘಾತ ವಿಮಾ ಶಿಬಿರ ಸೆ.8 ರಿಂದ 10 ರ ತನಕ ನರಿಮೊಗರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ.
ಆಸಕ್ತರು ಬೇಕಾಗುವ ಅಗತ್ಯ ದಾಖಲೆಗಳ ಮೂಲ ಪ್ರತಿಯನ್ನು ತರುವುದು ಕಡ್ಡಾಯವಾಗಿದೆ. ಹೊಸ ಆಧಾರ್ ಕಾರ್ಡ್ ನೋಂದಣಿಗೆ ಜನನ ಪ್ರಮಾಣ ಪತ್ರ, ಪೋಷಕರ ಆಧಾರ್ ಕಾರ್ಡ್, ಮಗುವಿನ ಜತೆ ಪೋಷಕರು ಕಡ್ಡಾಯವಾಗಿ ಬರತಕ್ಕದ್ದು. 18 ವರ್ಷದ ಒಳಗಿನವರಿಗೆ ಮಾತ್ರ ಹೊಸ ಆಧಾರ್ ನೋಂದಣಿ ಲಭ್ಯ.
ಹೆಸರು ತಿದ್ದುಪಡಿಗೆ ಪಾನ್ ಕಾರ್ಡ್, ವೋಟರ್ ಐಡಿ, ಪಾಸ್ ಪೋರ್ಟ್, ರೇಷನ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಎಸ್ ಎಸ್ ಎಲ್ ಸಿ, ಪಿಯುಸಿ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ ತರತಕ್ಕದ್ದು.
ಜನ್ಮ ದಿನಾಂಕ ತಿದ್ದುಪಡಿಗೆ ಪಾಸ್ ಪೋರ್ಟ್, ಜನನ ಪ್ರಮಾಣ ಪತ್ರ, ಎಸ್ ಎಸ್ ಎಲ್ ಸಿ, ಪಿಯುಸಿ ಪ್ರಮಾಣ ಪತ್ರ,, ಪಿಂಚಣಿ ಪಾವತಿಯ ಆದೇಶದ ಮೂಲಪ್ರತಿ, ಕೇಂದ್ರ ಹಾಗೂ ರಾಜ್ಯ ಸರಕಾರಿ ಸೇವಾ ಗುರುತಿನ ಚೀಟಿ ತರತಕ್ಕದ್ದು.
ವಿಳಾಸ ಬದಲಾವಣೆಗೆ ವೋಟರ್ ಐಡಿ, ಪಾಸ್್ ಪೋರ್ಟ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ವಾಸ್ತವ್ಯ ದೃಢೀಕರಣ ಪತ್ರ ತರತಕ್ಕದ್ದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
























