ಉಪ್ಪಿನಂಗಡಿ: ಶ್ರೀ ಕಾಳಿಕಾಂಬಾ ಯಕ್ಷ ಕಲಾ ಟ್ರಸ್ಟಿನ 50ನೇ ವರ್ಷದ ಸುವರ್ಣ ಶತಕ ಶ್ರೀ ಮಹಾಭಾರತ ಸರಣಿಯ ಮೂರನೇ ಹಂತದ ತಾಳಮದ್ದಳೆ ಕಾರ್ಯಕ್ರಮ ಇಚ್ಚುರೂ ಶ್ರೀ ಬಾಲಸುಬ್ರಮಣ್ಯ ದೇವಸ್ಥಾನದಲ್ಲಿ ಜರಗಿತು .

ಕಾರ್ಯಕ್ರಮವನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ಸುರೇಶ್ ಪುತ್ತೂರಾಯ ಉದ್ಘಾಟಿಸಿದರು. ಕಲಾಪೋಷಕ ಉಮೇಶ ಶೆಣೈ ರಾಮನಗರ, ಸತೀಶ್ ಕುಮಾರ್ ಸಾಫ್ಟ್ವೆರ್ ಇಂಜಿನಿಯರ್ ಬೆಂಗಳೂರು, ಅನುರಾಧ ಸತೀಶ್ ಕರ್ನಾಟಕ ಬ್ಯಾಂಕ್ ಬೆಂಗಳೂರು, ಪೆರಿಯಡ್ಕ ಸಾಂಸ್ಕೃತಿಕ ಕಲಾ ಕೇಂದ್ರದ ಸಂಚಾಲಕ ಕೆ.ಮಹಾಲಿಂಗೇಶ್ವರ ಭಟ್, ಪದ್ಮಾ ಕೆ ಆರ್ ಆಚಾರ್ಯ ಪುತ್ತೂರು ,ಸೂರ್ಯನಾರಾಯಣ ಪುತ್ತೂರಾಯ, ಕೃಷ್ಣಪ್ಪ ಕೆ. ಕಲ್ಲಂಡ ಶುಭ ಹಾರೈಸಿದರು.

ಪೂರ್ಣಿಮಾ ಪುತ್ತೂರಾಯ ಸ್ವಾಗತಿಸಿ ಟ್ರಸ್ಟಿನ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ವಂದಿಸಿದರು.
ಬಳಿಕ ಧೀಶಕ್ತಿ ಯಕ್ಷ ಬಳಗ ತೆಂಕಿಲ ಪುತ್ತೂರು ತಂಡದಿಂದ ಕವಿ ಶ್ರೀಧರ್ ಡಿಎಸ್ ವಿರಚಿತ ಪಾಂಡವ ಸ್ವರ್ಗಾರೋಹಣ ಪ್ರಸಂಗದಲ್ಲಿ ಭಾಗವತರಾಗಿ ನಿತೀಶ್ ಕುಮಾರ್ ವೈ ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ ಗುರುಮೂರ್ತಿ ಅಮ್ಮಣ್ಣಾಯ, ಅರ್ಥಧಾರಿಗಳಾಗಿ ಪದ್ಮಾ ಕೆ ಆರ್ ಆಚಾರ್ಯ, ಜಯಲಕ್ಷ್ಮಿ ವಿ.ಭಟ್, ಶಾಲಿನಿ ಅರುಣ ಶೆಟ್ಟಿ,ಗೀತಾ ಕೊಂಕೋಡಿ ಪ್ರೇಮಾ ನೂರಿತ್ತಾಯ, ಸುರೇಖಾ ಅಶೋಕ ರೈ, ಮುರುಘೇoದ್ರ ಮಿತ್ರ ಮಂಡಳಿ ಪುಂಜಾಲಕಟ್ಟೆ ಪ್ರಸ್ತುತಪಡಿಸಿದ ಕೀಚಕವಧೆ ಪ್ರಸಂಗದಲ್ಲಿ ಭಾಗವತರಾಗಿ ಕಿಶೋರ ಶೆಟ್ಟಿ ಮಡಂತ್ಯಾರು, ದಿನಕರ ಶೆಟ್ಟಿ ಅಂಕದಳ, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಕಾರ್ತಿಕ್ ಪಿಲಿಗೂಡು ಅರ್ಥಧಾರಿಗಳಾಗಿ ಪ್ರಭಾಕರ ಪಿ ಎಂ, ವಾಸುದೇವ ಪ್ರಭು, ಪಾತಿಲ ತಿಮ್ಮಪ್ಪ ಶೆಟ್ಟಿ, ಸುರೇಶ ಶೆಟ್ಟಿ ಪುಂಜಾಲಕಟ್ಟೆ, ಶ್ರೀ ದುರ್ಗಂಬಾ ಕಲಾಸಂಗಮ ಶರವೂರು ಪ್ರಸ್ತುತ ಪಡಿಸಿದ ಇರಾವಂತ ಕಾಳಗ ದಲ್ಲಿ ಭಾಗವತರಾಗಿ ಡಿ. ಕೆ ಆಚಾರ್ಯ, ಮೋಹನ್ ಶರವೂರು, ಅರ್ಥಧಾರಿಗಳಾಗಿ ರಾಘವೇಂದ್ರ ಭಟ್ ತೋಟoತ್ತಿಲ, ಗೋಪಾಲ್ ಭಟ್ ನೈಮಿಷ, ದಿವಾಕರ ಆಚಾರ್ಯ ಹಳೇನೇರೇಂಕಿ, ನಾರಾಯಣ ಭಟ್ ಅಲoಕಾರು, ರಾಮಪ್ರಸಾದ್ ಅಲಂಕಾರು ಭಾಗವಹಿಸಿದ್ದರು.
ಯಕ್ಷಗಾನ ತಂಡಗಳ ಸದಸ್ಯರಿಗೆ ಪ್ರಶoಸ ಪತ್ರವನ್ನು ಬಿ. ಸುಬ್ರಹ್ಮಣ್ಯ ರಾವ್, ಸುಂದರ ಶೆಟ್ಟಿ ಎಂಜಿರಪಲಿಕೆ, ಪ್ರದೀಪ ಹೆಬ್ಬಾರ್ ಚಾರ ಹೆಬ್ರಿ ಇವರು ನೀಡಿದರು. ತಂಡದ ಮುಖ್ಯಸ್ಥರನ್ನು ಪೂರ್ಣಿಮ ಪುತ್ತೂರಾಯ, ಸುರೇಶ ರಾವ್. ಬಿ, ಸಂಜೀವ ಪಾರೆಂಕಿ ಗೌರವಿಸಿದರು.
ಶ್ರುತಿವಿಸ್ಮಿತ್, ಗೀತಾ ಕುದ್ದಾಣ್ಣಾಯ, ಪದ್ಮನಾಭ ಕುಲಾಲ್ ಇಳಂತಿಲ ಕಾರ್ಯಕ್ರಮ ನಿರ್ವಹಿಸಿದರು.
























