ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲು ವಿದೇಶಿ ಫಂಡಿಂಗ್: ಪ್ರಕರಣದ ಪರಿಶೀಲನೆಗೆ ಇಡಿ ಎಂಟ್ರಿ

ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಇಡಿ ತನಿಖೆ ಆರಂಭವಾಗಿದ್ದು, ಅಪಪ್ರಚಾರ ಮಾಡಲು ವಿದೇಶದಿಂದ ಹಣ ವಿನಿಮಯವಾಗಿದೆ ಎನ್ನುವ ಆರೋಪದ ಕಾರಣಕ್ಕೆ ಈ ಬೆಳವಣಿಗೆ ನಡೆದಿರುವುದಾಗಿದೆ.

ವಿದೇಶಿ ಫಂಡಿಂಗ್ ಬಗ್ಗೆ ದೂರು ಬಂದ ಹಿನ್ನೆಲೆ ಇಡಿ ತನಿಖೆ ಈ ಪ್ರಕರಣಕ್ಕೆ ಎಂಟ್ರಿಯಾಗಿರುವುದಾಗಿದೆ‌. ಒಡನಾಡಿ ಹಾಗೂ ಸಂವಾದ ಸಂಸ್ಥೆಯ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಮಾಹಿತಿ ಪರಿಶೀಲಿಸಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮುಂದಾಗಿದ್ದಾರೆ. ಐದು ವರ್ಷಗಳ ಆರ್ಥಿಕ ವಹಿವಾಟಿನ ಬಗ್ಗೆ ದಾಖಲೆ ನೀಡುವಂತೆ ಈ ಸಂಸ್ಥೆಗಳು ಖಾತೆ ಹೊಂದಿರುವ ಬ್ಯಾಂಕುಗಳಿಗೆ ಪತ್ರ ಬರೆಯಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಪತ್ರ ಬರೆದು ಮನವಿ ಮಾಡಿಕೊಂಡಿದ್ದು, ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡಲು ಯೂಟ್ಯೂಬರ್‌ಗಳು ಕೆಲವರಿಗೆ ವಿದೇಶಿ ಫಂಡಿಂಗ್ ಬರುತ್ತಿರುವ ಅನುಮಾನ ಇದ್ದು, ಈ ಬಗ್ಗೆ ಇಡಿ ತನಿಖೆ ನಡೆಸುವಂತೆ ಕೋರಿಕೊಂಡಿದ್ದರು.





















































 
 
error: Content is protected !!
Scroll to Top