ಪುತ್ತೂರು: ಕ್ಷಣಮಾತ್ರದಲ್ಲಿಯೇ ಎದುರಾಳಿಯನ್ನು ಹೇಗೆ ಎದುರಿಸಬೇಕೆಂದು ಯೋಚಿಸಿ ಆಡುವ ಕಲೆಯೇ ಚೆಸ್. ಚೆಸ್ಆಟದಲ್ಲಿ ತಾಳ್ಮೆ ಹಾಗೂ ಏಕಾಗ್ರತೆ ಬಹು ಮುಖ್ಯವಾಗಿರುತ್ತದೆ. ಆಟದಲ್ಲಿ ಸೋಲು ಗೆಲುವು ಸರ್ವೆ ಸಾಮಾನ್ಯ. ಸೋತರೆ ಅನುಭವ, ಗೆದ್ದರೆ ಅವಕಾಶ ಸಿಗುತ್ತದೆ ಎಂದು ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ, ಕ್ಲಸ್ಟರ್ ಮುಖ್ಯಸ್ಥ ಶ್ರೀಹರಿ ಪಿ. ಹೇಳಿದರು.
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ( ಸ್ವಾಯತ್ತ )ದಲ್ಲಿ ದೈಹಿಕ ಶಿಕ್ಷಣ ವಿಭಾಗ ಮತ್ತು ಕ್ರೀಡಾ ಇಲಾಖೆ ಹಾಗೂ ಐಕ್ಯೂಎಸಿ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆದ ಅಂತರ್ ಜಿಲ್ಲಾ ಕಾಲೇಜು ಮಟ್ಟದ 44 ನೇ ಮಾನ್ಸೂನ್ ಚೆಸ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ. ಕೆ. ಎನ್. ಅಧ್ಯಕ್ಷತೆ ವಹಿಸಿದ್ದರು. ಪ್ರಿನ್ಸಿಪಾಲ್ ಡಾ. ಶ್ರೀಧರ್ ನಾಯ್ಕ್ ಶುಭ ಹಾರೈಸಿದರು. ವೇದಿಕೆಯಲ್ಲಿ ಕಾಲೇಜಿನ ಉಪ ಪ್ರಿನ್ಸಿಪಾಲ್ ಶ್ರೀಕೃಷ್ಣ ಗಣರಾಜ್ ಭಟ್ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ರವಿಶಂಕರ್. ವಿ. ಎಸ್. ಸ್ವಾಗತಿಸಿ, ಉಪನ್ಯಾಸಕ ಯತೀಶ್ ಕುಮಾರ್. ಬಿ ವಂದಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯಾ. ಪಿ. ಆರ್ ನಿಡ್ಪಳ್ಳಿ ನಿರ್ವಹಿಸಿದರು.
ಫಲಿತಾಂಶ:
ಪ್ರಥಮ-ವಿಷ್ಣು ಪ್ರಸಾದ್ (ಎಸ್ಡಿಎಂ ಕಾಲೇಜು ಉಜಿರೆ), ದ್ವಿತೀಯ-ಕಾರ್ತಿಕ್( ಭಂಡಾರ್ ಕಾರ್ ಸ್ ಕಾಲೇಜು ಕುಂದಾಪುರ), ತೃತೀಯ ಶ್ರೇಯಸ್ ಎಂ..ಎಸ್. (ಎಸ್ಡಿಎಂ ಕಾಲೇಜು ಉಜಿರೆ) ಪಡೆದುಕೊಂಡರೆ ನಂತರದ ೭ ಸ್ಥಾನವನ್ನು ಕ್ರಮವಾಗಿ ನಿಶಾಂತ್ ಗ್ರೆಗರಿ ಡಿ’ಸೋಜಾ(ಡಾ.ಬಿ.ಬಿ ಹೆಗ್ಡೆ ಕುಂದಾಪುರ), ಜೇಡನ್ ಫೆರ್ನಾಂಡಿಸ್( ಸಂತ ಅಲೋಷಿಯಸ್ ಕಾಲೇಜು ಮಂಗಳೂರು), ಆದಿತ್ಯ (ಸಂತ ಅಲೋಷಿಯಸ್ ಮಂಗಳೂರು), ಕೌಶಿಕ್ (ಕಾರ್ಸ್ಟ್ರೀಟ್ ಕಾಲೇಜು ಮಂಗಳೂರು), ಭಾಸ್ಕರ (ಎಸ್ಡಿಎಂ ಕಾಲೇಜು), ಸ್ವಸ್ತಿಕ್ ಬಂಗೇರ (ವಿವೇಕಾನಂದ ಕಾಲೇಜು ಪುತ್ತೂರು), ಆಯುಷ್ ಶೆಟ್ಟಿ (ಸಹ್ಯಾದ್ರಿ ಕಾಲೇಜು ಮಂಗಳೂರು) ಪಡೆದುಕೊಂಡಿದ್ದಾರೆ.
ಉತ್ತಮ ಮಹಿಳಾ ಆಟಗಾರರಾಗಿ ಆಯೆನಾ ಫಾತಿಮಾ (ಸಂತ ಆಗ್ನೇಸ್), ದೀಪಿಕಾ (ವಿವೇಕಾನಂದ ಕಾಲೇಜು ಪುತ್ತೂರು), ನಿಶಾ ಆರ್.ಎಸ್. (ವಿವೇಕಾನಂದ ಕಾಲೇಜು ಪುತ್ತೂರು)
























