ಶೀಘ್ರದಲ್ಲೇ ಸಾರ್ವಜನಿಕರಿಗೆ ಸಿಗಲಿದೆ ರಾಜಭವನ ವೀಕ್ಷಣೆಗೆ ಅವಕಾಶ

ಬೆಂಗಳೂರು: ವಿಧಾನ ಸೌಧವನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಿದ ಸರ್ಕಾರ ಸದ್ಯ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ರಾಜ ಭವನದ ವೀಕ್ಷಣೆಗೂ ಜನರಿಗೆ ಮುಕ್ತ ಅವಕಾಶವನ್ನು ಶೀಘ್ರದಲ್ಲೇ ಕಲ್ಪಿಸಲು ಮುಂದಾಗಿದೆ.

1840-1842 ರ ಅವಧಿಯಲ್ಲಿ ಸರ್ ಮಾರ್ಕ್ ಕಬ್ಬನ್ ನಿರ್ಮಿಸಿದ ರಾಜಭವನ ಮೂಲತಃ ಬ್ರಿಟಿಷ್ ಆಯುಕ್ತರ ನಿವಾಸವಾಗಿ ಬಳಸಲಾಗುತ್ತಿತ್ತು. ಆ ಕಾಲದಲ್ಲಿ ‘ರೆಸಿಡೆನ್ಸಿ’ ಎಂದೇ ಕರೆಯಲ್ಪಟ್ಟ ಈ ಕಟ್ಟಡವನ್ನು ನಂತರ ಗಣ್ಯರಿಗೆ ಆತಿಥ್ಯ ವಹಿಸುವ ಅತಿಥಿ ಗೃಹವಾಗಿ ಪರಿವರ್ತಿಸಲಾಯಿತು. ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಮತ್ತು ಅಮೆರಿಕದ ಪ್ರಥಮ ಮಹಿಳೆ ಎಲೀನ‌ರ್ ರೂನ್ವೆಲ್ಸ್ ಸೇರಿದಂತೆ ಅನೇಕರಿಗೆ ಇಲ್ಲಿ ಆತಿಥ್ಯ ನೀಡಲಾಗಿದೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ರಾಜಭವನದೊಳಗೆ ವಿಶೇಷ ವಾಕಿಂಗ್ ಟೂರ್ ಪ್ರಾರಂಭಿಸಲು ತಯಾರಿ ನಡೆಸಿದೆ. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಈಗಾಗಲೇ ಇದಕ್ಕೆ ಅಧಿಕೃತ ಅನುಮೋದನೆ ನೀಡಿದ್ದಾರೆ. ಪ್ರವಾಸ ಮಾರ್ಗ, ವೀಕ್ಷಣಾ ಸಮಯ ಮತ್ತು ಸಂದರ್ಶಕರಿಗೆ ಅನುಕೂಲಕರ ಸ್ಥಳಗಳನ್ನು ಗುರುತಿಸುವ ಕಾರ್ಯ ಸದ್ಯ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.





















































 
 
error: Content is protected !!
Scroll to Top