ಬೆಂಗಳೂರು: ನಾಡ ಹಬ್ಬ ಮೈಸೂರು ದಸರಾ ಹಬ್ಬವನ್ನು ಬಾನು ಮುಷ್ತಾಕ್ ಉದ್ಘಾಟನೆ ಮಾಡುವುದನ್ನು ನಾನು ಸ್ವಾಗತಿಸುತ್ತೇನೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.
ದಸರಾ ಹಬ್ಬ ರಾಷ್ಟ್ರೀಯ ಹಬ್ಬ. ಇದನ್ನು ಜಾತ್ಯಾತೀತವಾಗಿ ಆಚರಣೆ ಮಾಡಲಾಗುತ್ತದೆ. ಆದ್ದರಿಂದ ಬಾನು ಮುಷ್ತಾಕ್ ದಸರಾ ಹಬ್ಬ ಉದ್ಘಾಟನೆ ಮಾಡುವ ಸಂಗತಿ ನನಗೆ ಸಂತಸ ತಂದಿದೆ. ಮಹಾರಾಜರು ಸಹ ಇದನ್ನು ಒಪ್ಪಿದ್ದಾರೆ ಎಂದು ಹೇಳಿದ್ದಾರೆ.
ಜಾತಿ ಧರ್ಮ ಮರೆತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಬೆರೆಯಬೇಕು. ಇಂತಹ ವಿಷಯಗಳಲ್ಲಿ ಗೊಂದಲ ಸೃಷ್ಟಿ ಮಾಡುವುದನ್ನು ಬಿಜೆಪಿಯವರು ಬಿಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
























