ಮೈಸೂರು: ದಸರಾ ನಾಡಹಬ್ಬವಾಗಿದ್ದು, ಇದನ್ನು ಎಲ್ಲರೂ ಆಚರಿಸುತ್ತಾರೆ. ಈ ಕಾರ್ಯಕ್ರಮವನ್ನು ಬಾನು ಮುಷ್ತಾಕ್ ಉದ್ಘಾಟಿಸುವುದು ಸೂಕ್ತವಾಗಿದೆ ಎಂದು ಸಿ.ಎಂ. ಸಿದ್ದರಾಮಯ್ಯ ಹೇಳಿದ್ದಾರೆ.
ದಸರಾ ಉದ್ಘಾಟನೆಗೆ ಸಂಬಂದಿಸಿದ ಹಾಗೆ ಉನ್ನತ ಮಟ್ಟದ ಸಮಿತಿಯಲ್ಲಿ ಆಯ್ಕೆಯ ಅಧಿಕಾರ ನನಗೆ ನೀಡಲಾಗಿತ್ತು. ಅಲ್ಲಿ ಬಾನು ಮುಷ್ತಾಕ್ ಅವರನ್ನು ಆಹ್ವಾನ ಮಾಡುವುದೆಂದು ತೀರ್ಮಾನ ಮಾಡಲಾಯಿತು. ಆ ಹಿಂದೆ ಕವಿ ನಿಸಾರ್ ಅಹಮದ್ ಅವರು ದಸರಾ ಉದ್ಧಾಟಿಸಿದ್ದರು. ನಾಡಹಬ್ಬವನ್ನು ಇಂತದ್ದೇ ಧರ್ಮದವರು ಉದ್ಘಾಟನೆ ಮಾಡಬೇಕು ಎಂದೇನಿಲ್ಲ ಎಂದು ಅವರು ತಿಳಿಸಿದ್ದಾರೆ.
ನಾಡಹಬ್ಬ ದಸರಾ ಸಾಂಸ್ಕೃತಿಕ ಆಚರಣೆಯಾಗಿದೆ. ಇದು ಎಲ್ಲಾ ಧರ್ಮದವರಿಗೂ ಹಬ್ಬವೇ. ಇದು ಜಾತ್ಯಾತೀತ, ಧರ್ಮಾತೀತ ಹಬ್ಬ. ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿದ ಬಗ್ಗೆ ಧರ್ಮಾಂಧರು ಮಾತ್ರ ಮಾತನಾಡುತ್ತಾರೆ. ಅಂತಹವರು ಇತಿಹಾಸ ತಿಳಿದುಕೊಳ್ಳುವುದು ಉತ್ತಮ ಎಂದಿದ್ದಾರೆ.
























