ಪಿಎಂಶ್ರೀ ವೀರಮಂಗಲ ಶಾಲೆಗೆ ಪ್ರಧಾನಮಂತ್ರಿ ಕಛೇರಿಯ ಅಧಿಕಾರಿಗಳ ಭೇಟಿ | ಶಾಲೆಯ ಚಟುವಟಿಕೆಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಚಂದ್ರಮೋಹನ್ ಠಾಕೋರ್

ಪುತ್ತೂರು: ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಪಿಎಂಶ್ರೀ ಶಾಲೆ ವೀರಮಂಗಲ ಇಲ್ಲಿಗೆ ಪಿಎಂ ಕಛೇರಿಯಿಂದ IAS ಅಧಿಕಾರಿ ಚಂದ್ರಮೋಹನ್ ಠಾಕೋರ್, ಸಮಗ್ರ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರಾದ IAS ಅಧಿಕಾರಿ ವಿದ್ಯಾಕುಮಾರಿ ಭೇಟಿ ನೀಡಿ ಶಾಲಾ ಚಟುವಟಿಕೆಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ಅವರೊಂದಿಗೆ ದ.ಕ ಜಿಲ್ಲಾ ಉಪನಿರ್ದೇಶಕ ಶಶಿಧರ್ ಜಿ ಎಸ್,  ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್., ಎಪಿಸಿ ವಿದ್ಯಾಕುಮಾರಿ, ಅಕ್ಷರದಾಸೋಹ ಸಹ ನಿರ್ದೇಶಕ ವಿಷ್ಣುಪ್ರಸಾದ್, ಸಮನ್ವಯಾಧಿಕಾರಿ ನವೀನ್ ಸ್ಟೀಫನ್ ವೇಗಸ್, ಶಿಕ್ಷಣ ಸಂಯೋಜಕ ಹರಿಪ್ರಸಾದ್, ಎಸ್ ಎಸ್ ಕೆ ಕಛೇರಿಯ ಉಷಾ ಬಂಗೇರ, ನರಿಮೊಗರು ಸಿ ಆರ್ ಪಿ ಪರಮೇಶ್ವರಿ, ಆಗಮಿಸಿದ್ದರು.

ಶಾಲಾ ಮುಖ್ಯ ಶಿಕ್ಷಕ ತಾರಾನಾಥ ಪಿ, ಎಸ್ ಡಿ ಎಂ ಸಿ ಅಧ್ಯಕ್ಷ ರವಿಚಂದ್ರ, ಶಿಕ್ಷಕರಾದ ಹರಿಣಾಕ್ಷಿ, ಶೋಭಾ , ಶ್ರೀಲತಾ, ಕವಿತಾ, ಹೇಮಾವತಿ, ಶಿಲ್ಪರಾಣಿ, ಸೌಮ್ಯ ಸರ್ವರನ್ನು ಸ್ವಾಗತಿಸಿದರು. ಪಿಎಂಶ್ರೀ ಚಟುವಟಿಕೆಗಳನ್ನು ವೀಕ್ಷಿಸಿ ಶಾಲೆಯ ಅಭಿವೃದ್ಧಿ ಕಂಡು ಪ್ರಶಂಶೆ ವ್ಯಕ್ತ ಪಡಿಸಿದರು.





















































 
 

error: Content is protected !!
Scroll to Top