ಸೋಷಿಯಲ್ ಮೀಡಿಯಾದಲ್ಲಿ ಅಸಭ್ಯ ಕಮೆಂಟ್ ಹಾಕಿ ತೇಜೋವಧೆ ಮಾಡಿದ ಪ್ರಕರಣ
ಬೆಂಗಳೂರು: ನಟಿ ರಮ್ಯಾಗೆ ಸಾಮಾಜಿಕ ಜಾಲಾತಾಣದಲ್ಲಿ ಅಶ್ಲೀಲ ಸಂದೇಶ ಕಳಿಸಿದ್ದ ಮತ್ತಷ್ಟು ಮಂದಿಯನ್ನ ಸಿಸಿಬಿ ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ. ನಟಿಗೆ ಅಶ್ಲೀಲ ಸಂದೇಶ ಮಾಡಿ ಸಿಕ್ಕಿ ಬಿದ್ದವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
ಬಿಜಾಪುರ, ಚಿತ್ರದುರ್ಗ, ಬೆಂಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ 9 ಆರೋಪಿಗಳನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು ಮತ್ತೆ ಇಬ್ಬರು ಉತ್ತರ ಕರ್ನಾಟಕದ ಮೂಲದ ಯುವಕರನ್ನು ಬಂಧಿಸಿದ್ದಾರೆ. ಬಂಧಿತರಿಬ್ಬರು ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.
ನಟಿ ರಮ್ಯಾ ದೂರಿನಲ್ಲಿ 40ಕ್ಕೂ ಅಧಿಕ ಅಕೌಂಟ್‌ಗಳ ಡಿಟೈಲ್ಸ್ ಕೊಟ್ಟಿದ್ದು. 12 ಅಕೌಂಟ್‌ಗಳ ಮಾಹಿತಿ ಪಡೆದು 12 ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಮತ್ತೆ 10ಕ್ಕೂ ಹೆಚ್ಚು ಮಂದಿಯ ಇನ್‌ಸ್ಟಾಗ್ರಾಂ ಖಾತೆಯ ಮಾಹಿತಿ ಪಡೆದು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಕೆಲವರು ಕೋರ್ಟ್ ಮೊರೆ ಹೋಗಿದ್ದು, ಉಳಿದ ಕೆಲವರು ಅಕೌಂಟ್‌ನಲ್ಲಿ ಹಾಕಿದ್ದ ಕಾಮೆಂಟ್‌ಗಳನ್ನು ಡಿಲೀಟ್ ಮಾಡಿ ತಲೆಮರಿಸಿಕೊಂಡಿದ್ದಾರೆ. ಆರೋಪಿತರ ಟವರ್ ಲೊಕೇಷನ್‌ಗಳನ್ನ ಪತ್ತೆ ಮಾಡಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
























