ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಗಣಪತಿ ಹೋಮ, ತೆನೆ ಪೂಜೆ | ಸಭಾಭವನದ ಹಾಸು ಕಲ್ಲು ಉದ್ಘಾಟನೆ

ಕಾಣಿಯೂರು: ಕುದ್ಮಾರಿನ ಜನತೆಯ ಪ್ರೀತಿ, ಸಹಕಾರ ಶ್ಲಾಘನೀಯವಾಗಿದ್ದು ದೇವಸ್ಥಾನದ ಬ್ರಹ್ಮಕಲಶೋತ್ಸವವು ಎಲ್ಲರ ಸಹಕಾರದಿಂದ ಅತ್ಯಂತ ಸಂಭ್ರಮದಿಂದ ಯಶಸ್ವಿಯಾಗಿ ನಡೆದಿದೆ ಎಂದು ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸವಣೂರು ಸೀತಾರಾಮ ರೈ ಹೇಳಿದರು.

ಅವರು ಆ.27 ರಂದು ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಸಭಾಭವನದ ನೆಲಕ್ಕೆ ಅಳವಡಿಸಿದ ಹಾಸು ಕಲ್ಲನ್ನು ಉದ್ಘಾಟಿಸಿ ಮಾತನಾಡಿದರು.

ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಮಾತನಾಡಿ, ಶಾಂತಿಮೊಗರು ಕ್ಷೇತ್ರವು ಊರ, ಪರವೂರ ಭಕ್ತರ ಸಹಕಾರದಿಂದ ಅಭಿವೃದ್ಧಿಗೊಳ್ಳುತ್ತಿದ್ದು, ಇನ್ನು ಮುಂದೆಯೂ ದೇವರ ಸಾನಿಧ್ಯ ನಿತ್ಯ ನಿರಂತರ ಅಭಿವೃದ್ಧಿಯಾಗುವಲ್ಲಿ ಎಲ್ಲರ ಸಹಕಾರ ಅಗತ್ಯ ಎಂದರು.





















































 
 

ದೇವಸ್ಥಾನದ ಅನುವಂಶೀಯ ಮೊಕ್ತೇಸರ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಅರ್ಚಕ ರಮಾನಂದ ಭಟ್ ತೋಟಂತಿಲ, ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಶೂರಪ್ಪ ಗೌಡ ಪಟ್ಟೆತ್ತಾನ, ಉಪಾಧ್ಯಕ್ಷ ವೆಂಕಟೇಶ್ ಭಟ್ ಕೊಯಕ್ಕುಡೆ, ಜತೆ ಕಾರ್ಯದರ್ಶಿ ಪದ್ಮನಾಭ ದೋಳ, ಆಡಳಿತ ಸಮಿತಿ ಸದಸ್ಯರಾದ ಬಾಲಕೃಷ್ಣ ಗೌಡ ನೂಜಿ, ಶುಭಾ. ಆರ್. ನೋಂಡ ಬರೆಪ್ಪಾಡಿ, ನಿಟ್ಟೋಣಿ ಕೆಡೆಂಜಿ, ಉತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಬರೆಪ್ಪಾಡಿ, ಪ್ರಧಾನ ಕಾರ್ಯದರ್ಶಿ ಉಮೇಶ್ ಕೆರೆನಾರು, ತಾರಾನಾಥ ರೈ ನಗ್ರಿ, ನಾಗೇಶ್ ಕೆಡೆಂಜಿ, ಯಶೋಧರ ಕೆಡೆಂಜಿಕಟ್ಟ, ಲೋಹಿತಾಕ್ಷ ಕೆಡೆಂಜಿಕಟ್ಟ, ಮೇದಪ್ಪ ಕುವೆತ್ತೋಡಿ, ದೇವಪ್ಪ ಗೌಡ ನಡುಮನೆ, ದೇವರಾಜ್ ನೂಜಿ, ಚಾರ್ವಾಕ ಸಿ.ಎ ಬ್ಯಾಂಕ್ ಸಿಇಓ ಅಶೋಕ್ ಗೌಡ ಮತ್ತಿತರರು ಉಪಸ್ಥಿತರಿದ್ದರು.

ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಸ್ವಾಗತಿಸಿ, ವಂದಿಸಿದರು.

ಗಣಪತಿ ಹೋಮ, ತೆನೆ ವಿತರಣೆ :

ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಗಣೇಶ ಚತುಥಿ ಪ್ರಯುಕ್ತ ಬೆಳಿಗ್ಗೆ ಗಣಪತಿ ಹೋಮ, ತೆನೆ ವಿತರಣೆ, ತೆನೆ ಕಟ್ಟುವ ಕಾರ್ಯಕ್ರಮವು ನಡೆಯಿತು.

error: Content is protected !!
Scroll to Top