ಹುಬ್ಬಳ್ಳಿ: ಪ್ರಕೃತಿಯಲ್ಲಿ ದೇವರನ್ನು ಕಾಣುವವರು ನಾವು. ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಮೇಡಂ ಅವರು ಸೀರೆ ಉಟ್ಟು, ಕುಂಕುಮ ಹಚ್ಚಿ, ಹೂ ಮುಡಿದು ಬಂದರೆ ನಮ್ಮ ಅಭ್ಯಂತರ ಇಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಕೆಲ ಸಮಯದ ಹಿಂದೆ ಸಮ್ಮೇಳನ ಒಂದರಲ್ಲಿ ಕನ್ನಡಾಂಬೆಗೆ ಕುಂಕುಮ ಇಟ್ಟು, ಸೀರೆಯುಡಿಸಿದ್ದರಿಂದ ಕರ್ನಾಟಕದಿಂದ ಮುಸ್ಲಿಮರನ್ನೇ ಹೊರಗಿಟ್ಟಿದ್ದಾಗಿ ನೀವು ಹೇಳಿದ್ದಿರಿ. ಈಗ ಅದೇ ಚಾಮುಂಡೇಶ್ವರಿ ಉತ್ಸವಕ್ಕೆ ಚಾಲನೆ ನೀಡಲು ನಿಮಗೆ ಮನಸ್ಸಾದರೂ ಹೇಗೆ ಬರುತ್ತದೆ. ನಾವು ತಾಯಿ ಭುವನೇಶ್ವರಿಯಲ್ಲಿ ದೇವರನ್ನು ಕಾಣುತ್ತೇವೆ. ಹೀಗಿರುವಾಗ ನೀವು ದಸರಾ ಉದ್ಘಾಟನೆಗೆ ಹೇಗೆ ಒಪ್ಪಿಕೊಂಡಿರಿ ಎಂದು ಪ್ರಶ್ನೆ ಮಾಡಿದ್ದಾರೆ.
ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಮಂತ್ರಿಸಿರುವುದರ ಹಿಂದೆ ರಾಜಕೀಯ ಸಂಚು ಇದೆ. ನಮಗೆ ಹೆಣ್ಣು ದೇವರ ಸಮಾನ. ನಿಮ್ಮ ಧರ್ಮದಲ್ಲಿ ಇದು ಇಲ್ಲ ಎಂದು ಅವರು ಹೇಳಿದ್ದಾರೆ.
























