ಪುತ್ತೂರು: ಅಕ್ಷಯ ಎಜುಕೇಶನಲ್j ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಪದವಿ ಕಾಲೇಜಿನ ಅದ್ವಯ ಸಾಹಿತ್ಯ ಸಂಘ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆಯ ಕೋಶದ ಸಹಭಾಗಿತ್ವದಲ್ಲಿ “ಸಾಹಿತ್ಯ ಮತ್ತು ಸಾಮಾಜಿಕ ಬದ್ಧತೆ” ವಿಚಾರ ಗೋಷ್ಠಿಯನ್ನು ಕಾಲೇಜಿನ ಸಭಾಂಗಣದಲ್ಲಿ ಸಂಘಟಿಸಿತು.
ಭಾರತ್ ಬೋಧ್ ಮಾಲ ಉಪನ್ಯಾಸ ಸರಣಿ-14 ರ ಶೀರ್ಷಿಕೆ ಸಾಹಿತ್ಯ ಮತ್ತು ಸಾಮಾಜಿಕ ಬದ್ಧತೆ ಎಂಬ ವಿಷಯದಲ್ಲಿ ಚುಟುಕು ಸಾಹಿತ್ಯ ಪರಿಷತ್ ಸುಳ್ಯ ಇದರ ಅಧ್ಯಕ್ಷೆ ಅಶ್ವಿನಿ ಕೊಡಿಬೈಲ್ ವಿಚಾರಧಾರೆ ಮಂಡಿಸಿದರು. ಸಾಹಿತ್ಯದ ಅಭಿರುಚಿ ಬೆಳೆಸುವುದು ಮತ್ತು ಪರಿಪೋಷಿಸುವುದರಿಂದ ಸಾಹಿತ್ಯ ಕ್ಷೇತ್ರದ ಆಳ ಮತ್ತು ವಿಸ್ತಾರವನ್ನು ಕುತೂಹಲದಿಂದ ಅನ್ವೇಷಣೆ ಮಾಡುತ್ತಾ ಹೋದ ಹಾಗೆ ವ್ಯಕ್ತಿತ್ವ ವಿಕಸನದೊಂದಿಗೆ ಸಾಹಿತ್ಯವು ಉತ್ಕೃಷ್ಟವಾದ ಅನುಭವವನ್ನು ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.
ಡಾ. ಶೋಭಿತಾ ಸತೀಶ್, ರಾಷ್ಟ್ರೀಯ ಮಂತ್ರಿ, ವಿದ್ಯಾ ಭಾರತಿ ಉಚ್ಚ ಶಿಕ್ಷಣ ಸಂಸ್ಥಾನದ ಅಶ್ವಿನಿ ಕೊಡಿಬೈಲ್, ಸಾಹಿತ್ಯಕ್ಕೆ ಗಾಯನ ಹಾಡಿದರು. ಉಪ ಪ್ರಾಂಶುಪಾಲ ರಕ್ಷಣ್ ಟಿ. ಆರ್. ಅಧ್ಯಕ್ಷತೆ ವಹಿಸಿದ್ದರು. ಅದ್ವಯ ಸಾಹಿತ್ಯ ಸಂಘದ ಸಂಯೋಜಕಿ ಸಾಯಿ ಕೃಪಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳ ಪರಿಚಯವನ್ನು ಕನ್ನಡ ವಿಭಾಗದ ಮುಖ್ಯಸ್ಥ ಹರಿಶ್ಚಂದ್ರ ಮಾಡಿದರು. ಆಂತರಿಕ ಗುಣಮಟ್ಟದ ಭರವಸೆಯ ಕೋಶದ ಸಂಯೋಜಕಿ ರಶ್ಮಿ ಕೆ. ಉಪಸ್ಥಿತರಿದ್ದರು. ಕುಮಾರಿ ನಿಸ್ಮಿತಾ ಕೆ ಪ್ರಾರ್ಥನೆ ಹಾಡಿದರು. ಕುಮಾರಿ ಗೀತಾ ವಂದಿಸಿದರು. ಕುಮಾರಿ ಧನ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.
























