ತಲಪಾಡಿಯಲ್ಲಿ ಭೀಕರ ಅಪಘಾತ : 6 ಮಂದಿ ಸಾವು

ಉಳ್ಳಾಲ: ತಲಪಾಡಿಯ ಟೋಲ್ ಗೇಟ್ ಸಮೀಪ ರಿಕ್ಷಾ ಮತ್ತು ಬಸ್ ನಡುವೆ ಭೀಕರ ಅಪಘಾತ ನಡೆದಿದ್ದು, ಒಂದೇ ಕುಟುಂಬದ ಐದು ಜನ ಸೇರಿ ಒಟ್ಟು ಆರು ಮಂದಿ ಮೃತ ಪಟ್ಟಿದ್ದಾರೆ.

ಮೃತರನ್ನು ರಿಕ್ಷಾ ಚಾಲಕ ಹೈದರ್ ಆಲಿ(47), ಫರಂಗಿಪೇಟೆಯ ಅವ್ವಮ್ಮ, ಅಜ್ಜಿನಡ್ಕದ ಖತುಜಾ (60), ಹಸ್ನಾ, ನಫೀಸಾ (52), ಆಯೆಶಾ (19) ಎಂದು ಗುರುತಿಸಲಾಗಿದೆ. ಖತುಜಾ ಮತ್ತು ನಫೀಸಾ ಸಹೋದರಿಯರಾಗಿದ್ದು, ಅವ್ವಮ್ಮ ನಫೀಸಾರ ಅತ್ತೆ. ಹಸ್ನ ಅವರು ಖತುಜಾ ಅವರ ಪುತ್ರಿಯಾಗಿದ್ದರೆ, ಆಯೆಶಾ ಅವರು ನಫೀಸಾರ ಪುತ್ರಿಯಾಗಿದ್ದಾರೆ.

ಮೃತ ದುರ್ದೈವಿಗಳು ಅಜ್ಜಿನಡ್ಕ ಮುಳ್ಳುಗುಡ್ಡೆಯಿಂದ ಮಂಜೇಶ್ವರದ ಕುಂಜತ್ತೂರಿನ ಸಂಬಂಧಿಕರ ಮನೆಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.





















































 
 

ಘಟನೆಯಲ್ಲಿ ಇಬ್ಬರು ಪಾದಾಚಾರಿಗಳು ಗಾಯಗೊಂಡಿದ್ದು, ಅವರನ್ನು ಮಂಗಲ್ಪಾಡಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top