ಲಕ್ನೋ: ಉತ್ತರ ಪ್ರದೇಶದ ಸಿ ಎಂ ಯೋಗಿ ಆದಿತ್ಯನಾಥ್ ಸರ್ಕಾರವು ಸೆ. 1 ರಿಂದ 30 ರ ವರೆಗೆ ರಾಜ್ಯಾದ್ಯಂತ ರಸ್ತೆ ಸುರಕ್ಷತಾ ಅಭಿಯಾನ ನಡೆಸಲಿದ್ದು, ಇದಕ್ಕೆ ಅನುಗುಣವಾಗಿ ‘ಹೆಲ್ಮೆಟ್ ಇಲ್ಲ, ಇಂಧನ ಇಲ್ಲ’ ಅಭಿಯಾನ ನಡೆಸಲು ಸರ್ಕಾರ ನಿರ್ಧರಿಸಿದೆ.
ಈ ಅಭಿಯಾನದ ಅಡಿಯಲ್ಲಿ ಜಿಲ್ಲಾಧಿಕಾರಿಗಳು ರಸ್ತೆ ಸುರಕ್ಷತಾ ಸಮಿತಿಯ ಸಮನ್ವಯದಲ್ಲಿ ಪೊಲೀಸ್, ಸಾರಿಗೆ, ಕಂದಾಯ ಅಧಿಕಾರಿಗಳು ಮೋಟರ್ ವಾಹನ ಕಾಯ್ದೆಯಡಿ ದ್ವಿಚಕ್ರ ಸವಾರರು ಹೆಲ್ಮೆಟ್ ಕಡ್ಡಾಯ ನಿಯಮಗಳನ್ನು ಪಾಲನೆ ಮಾಡುವ ನಿಟ್ಟಿನಲ್ಲಿ ಜಂಟಿಯಾಗಿ ಕೆಲಸ ಮಾಡಲಿದ್ದಾರೆ.
ಈ ಅಭಿಯಾನದ ಪ್ರಕಾರ ಹೆಲ್ಮೆಟ್ ಧರಿಸದ ಸವಾರರಿಗೆ ಪೆಟ್ರೋಲ್ ಪಂಪ್‌ಗಳಲ್ಲಿ ಇಂಧನ ನಿರಾಕರಣೆ, ದಂಡ ವಿಧಿಸುವ ಬದಲು ರಸ್ತೆ ಸುರಕ್ಷತಾ ನಿಯಮಗಳ ಪಾಲನೆಗೆ ಉತ್ತೇಜನ ನೀಡುವ ಗುರಿಯನ್ನು ಹೊಂದಿವೆ.
























