ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದ ಅರಂತೋಡಿನ ಸುಶ್ಮಿತಾ ಬಿ.ಎಸ್.ಎಫ್. ಗೆ ಆಯ್ಕೆ

ಪುತ್ತೂರು: ಅತ್ಯುತ್ತಮ ತರಬೇತಿಯ ಮೂಲಕ ಭಾರತೀಯ ಸೇನೆಗೆ ಗ್ರಾಮೀಣ ಪ್ರದೇಶದ ಯುವಕ ಯುವತಿಯರು ನಿರಂತರವಾಗಿ ಸೇರ್ಪಡೆಗೊಳ್ಳಲು ಕಾರಣವಾಗಿರುವ ಕರಾವಳಿ ಭಾಗದ ಪ್ರತಿಷ್ಠಿತ ತರಬೇತಿ ಸಂಸ್ಥೆ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದು ನಿರಂತರವಾಗಿ ಸಶಸ್ತ್ರ ಪಡೆಗಳ ನೇಮಕಾತಿಗಳಿಗೆ ಪ್ರಯತ್ನಿಸುತ್ತಾ ಅಂತಿಮವಾಗಿ ಭಾರತೀಯ ಗಡಿ ರಕ್ಷಣಾ ಪಡೆ ( BSF )ಗೆ ಸಿಬ್ಬಂದಿ ನೇಮಕಾತಿ ಆಯೋಗ ( SSC )ನಡೆಸಿದ ಪರೀಕ್ಷೆಯಲ್ಲಿ ಸುಳ್ಯ ತಾಲೂಕಿನ ಸುಶ್ಮಿತಾ ಆಯ್ಕೆಯಾಗಿದ್ದಾರೆ.

ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು  ಗ್ರಾಮದ ಬೆದ್ರಪಣೆಯ ನಾಗಪ್ಪ ಎಂ.ಎ. ಹಾಗೂ ಜಾನಕಿ ದಂಪತಿ ಪುತ್ರಿ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ತಲೆ, ಸರಕಾರಿ ಪ್ರೌಢಶಾಲೆ ಮರ್ಕಂಜ,  NMPU  ಅರಂತೋಡು, ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿನಿಯಾಗಿರುತ್ತಾರೆ.

ಇವರು ಆಯ್ಕೆಯಾಗುವ ಮೂಲಕ ವಿದ್ಯಾಮಾತಾದ ಸಾಧನೆಯ ಮುಕುಟಕ್ಕೆ ಗರಿಯೊಂದು ಸೇರಿದೆ.





















































 
 
error: Content is protected !!
Scroll to Top