ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಧೋಡಾ ಜಿಲ್ಲೆಯಲ್ಲಿ ಭಾರೀ ಮೇಘಸ್ಪೋಟ ನಡೆದಿದ್ದು, ದಿಢೀರ್ ಪ್ರವಾಹದಲ್ಲಿ 4 ಮಂದಿ ಸಾವನ್ನಪ್ಪಿದ್ದಾರೆ.
ಪ್ರವಾಹ ಕಾರಣದಿಂದ ಚೆನಾಬ್ ನದಿ ಉಕ್ಕಿ ಹರಿಯುತ್ತಿದ್ದು, ಭಾರೀ ಮಳೆಯ ಕಾರಣಕ್ಕೆ 10 ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಕಥುವಾ ಮತ್ತು ಕಿಶ್ತ್ವಾರ್‌ನಲ್ಲಿ ಇದೇ ರೀತಿಯ ಘಟನೆ ಸಂಭವಿಸಿದ ನಂತರ ಈಗ ಧೋಡಾದಲ್ಲಿಯೂ ಮೇಘಸ್ಪೋಟ ಸಂಭವಿಸಿರುವುದಾಗಿದೆ.
ಜಮ್ಮು ಕಾಶ್ಮೀರದ ಹಲವಾರು ಪ್ರದೇಶಗಳಲ್ಲಿ ಭಾರೀ ಮಳೆಯಾಗಿವ ಸಾಧ್ಯತೆಯನ್ನು ಹವಾಮಾನ ಇಲಾಖೆ ನೀಡಿದ್ದು, ಆ ಬಳಿಕ ಈ ಘಟನೆ ನಡೆದಿದೆ.
























