ಧರ್ಮಸ್ಥಳ ಪ್ರಕರಣ NIA ಗೆ ವಹಿಸುವ ಅಗತ್ಯ ಇಲ್ಲ: ಡಾ. ಜಿ. ಪರಮೇಶ್ವರ್

ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಪೊಲೀಸರು ತನಿಖೆಗೆ ಅಗತ್ಯವಾದ ಎಲ್ಲವನ್ನೂ ಮಾಡುತ್ತಾರೆ. ಅದು ಮಾಡಿ, ಇದು ಮಾಡಿ ಎನ್ನಲು ನಾವು ಯಾರು? ಮಂಪರು ಪರೀಕ್ಷೆ ಬೇಕೋ ಬೇಡವೋ ಎನ್ನುವುದನ್ನು ನಾನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

SIT ಸರಿಯಾದ ರೀತಿಯಲ್ಲಿ ತನಿಖೆ ಮಾಡುತ್ತಿದೆ. ಅದನ್ನು NIA ಗೆ ವಹಿಸುವ ಅಗತ್ಯ ಇಲ್ಲ. ಮೊದಲು ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಿ. ಅದರಿಂದ ಸತ್ಯ ಹೊರಬರಲು ಸಾಧ್ಯವಿಲ್ಲ. ಹಾಗೆಯೇ ತನಿಖೆಯನ್ನು ಮಾಡಲು ಸಮಯ ನಿಗದಿ ಮಾಡಲು ಸಾಧ್ಯವಿಲ್ಲ. ಆದಷ್ಟು ಬೇಗ ತನಿಖೆ ಮುಗಿಸಲು ಸೂಚಿಸಲಾಗಿದೆ ಎಂದಿದ್ದಾರೆ.

ಧರ್ಮಸ್ಥಳ ರ್ಯಾಲಿ‌ಗಳ ಬಗೆಗೂ ಅವರು ಮಾತನಾಡಿದ ಅವರು, ದೇವರ ದರ್ಶನ ಮಾಡಲು ಅವರು ರ್ಯಾಲಿ ಮಾಡುತ್ತಿರಬಹುದು. ಹೋಗಲಿ. ಅವರನ್ನು ತಡೆಯುವುದು ಸಾಧ್ಯವೇ? ಆದರೆ ಪ್ರಕರಣವನ್ನು ರಾಜಕೀಯ ಮಾಡಬೇಡಿ ಎನ್ನುವುದೇ ನನ್ನ ಮನವಿ ಎಂದು ನುಡಿದಿದ್ದಾರೆ.





















































 
 
error: Content is protected !!
Scroll to Top