ಸೆ.7ಕ್ಕೆ ಚಂದ್ರ ಗ್ರಹಣ; ಸೆ.21ಕ್ಕೆ ಸೂರ್ಯ ಗ್ರಹಣ
ಬೆಂಗಳೂರು : ಸೆಪ್ಟೆಂಬರ್ ತಿಂಗಳು ಖಗೋಳ ವಿಜ್ಞಾನ ಆಸಕ್ತರಿಗೆ ಬಹಳ ವಿಶೇಷವಾಗಿರಲಿದೆ. ಒಂದೇ ತಿಂಗಳಲ್ಲಿ ಎರಡು ದೊಡ್ಡ ಗ್ರಹಣಗಳು ಸಂಭವಿಸಲಿವೆ. ಸೆಪ್ಟೆಂಬರ್ 7ರಂದು ಚಂದ್ರ ಗ್ರಹಣ ಮತ್ತು ಸೆಪ್ಟೆಂಬರ್ 21ರಂದು ಸೂರ್ಯ ಗ್ರಹಣ ಸಂಭವಿಸಲಿದೆ.
ಸೆ. 7ರಂದು ಸಂಭವಿಸಲಿರುವ ಚಂದ್ರ ಗ್ರಹಣ ಭಾರತದಲ್ಲಿ ಗೋಚರಿಸಲಿದೆ. 2025ರ ಎರಡನೇ ಸೂರ್ಯ ಗ್ರಹಣ ಸೆಪ್ಟೆಂಬರ್ 21ರ ರಾತ್ರಿ 11 ಗಂಟೆಗೆ ಪ್ರಾರಂಭವಾಗಿ ಸೆಪ್ಟೆಂಬರ್ 22ರ ಬೆಳಗ್ಗೆ 3.24ಕ್ಕೆ ಕೊನೆಗೊಳ್ಳುತ್ತದೆ. ಇದು ಭಾಗಶಃ ಗ್ರಹಣವಾಗಿದ್ದು, ಭಾರತದಲ್ಲಿ ಗೋಚರಿಸುವುದಿಲ್ಲ. ನ್ಯೂಜಿಲೆಂಡ್, ಫಿಜಿ, ಅಂಟಾರ್ಕ್ಟಿಕಾ ಮತ್ತು ಆಸ್ಟ್ರೇಲಿಯಾದ ದಕ್ಷಿಣ ಭಾಗಗಳಲ್ಲಿ ಗೋಚರಿಸಲಿದೆ.
ಗ್ರಹಣದ ಒಟ್ಟು ಅವಧಿ 4.24 ತಾಸುಗಳು. ಭಾರತದಲ್ಲಿ ಗೋಚರಿಸದಿದ್ದರೂ ಧಾರ್ಮಿಕ ಹಿನ್ನೆಲೆಯಲ್ಲಿ ಗ್ರಹಣ ಫಲದ ಲೆಕ್ಕಾಚಾರ ಹಾಕಲಾಗುತ್ತದೆ. ಈ ಗ್ರಹಣವು ಭಾಗಶಃ ಸೂರ್ಯಗ್ರಹಣವಾಗಿದ್ದು, ಇದು ಭಾರತದಲ್ಲಿ ಗೋಚರಿಸುವುದಿಲ್ಲ. ಇದಲ್ಲದೆ ಈ ವರ್ಷ ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿಯ ಮೂರು ತಿಂಗಳಲ್ಲಿ ಮೂರು ಸೂಪರ್ ಮೂನ್‌ಗಳನ್ನು ನೋಡಬಹುದು. ಅಕ್ಟೋಬರ್ 7, ನವೆಂಬರ್ 5, ಡಿಸೆಂಬರ್ 4ರಂದು ಸೂಪರ್ ಮೂನ್ ದಿನವಾಗಿರಲಿದೆ.
























