ಪ್ರೊ. ಕೆ. ಚಿನ್ನಪ್ಪ ಗೌಡ, ನಾ. ದಾಮೋದರ ಶೆಟ್ಟಿ ಆಯ್ಕೆ
ಮಂಗಳೂರು: ಜಾನಪದ ವಿದ್ವಾಂಸ, ನಿವೃತ್ತ ಕುಲಪತಿ ಪ್ರೊ. ಕೆ. ಚಿನ್ನಪ್ಪ ಗೌಡ ಮತ್ತು ಸಾಹಿತಿ, ರಂಗಕರ್ಮಿ ನಾ. ದಾಮೋದರ ಶೆಟ್ಟಿ ಅವರು ಸಾಹಿತಿ, ಸಹಕಾರಿ ಕ್ಷೇತ್ರದ ಮುಖಂಡ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರ ಜನ್ಮಶತಮಾನೋತ್ಸವ ಹಿನ್ನೆಲೆ ನೀಡುವ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಆ. 28 ರಂದು ಬಂಟ್ವಾಳ ಸಮೀಪದ ಏರ್ಯ ಬೀಡುವಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಸಾಹಿತಿ ಪ್ರೊ. ಹಂಪ ನಾಗರಾಜಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಪ್ರಶಸ್ತಿ ತಲಾ 1 ಲಕ್ಷ ರೂ. ನಗದನ್ನು ಒಳಗೊಂಡಿದೆ ಎಂದು ಏರ್ಯ ಫೌಂಡೇಶನ್ ಅಧ್ಯಕ್ಷ ಏರ್ಯ ಬಾಲಕೃಷ್ಣ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
























