ಧರ್ಮಸ್ಥಳ: ನೂರಾರು ಶವಗಳನ್ನು ಹೂತಿದ್ದಾಗಿ ಹೇಳಿದ ಅನಾಮಿಕ ದೂರುದಾರ ಮಾಸ್ಕ್‌ಮ್ಯಾನ್ ಯಾರು ಎನ್ನುವ ಸತ್ಯ ಬಯಲಾಗಿದ್ದು, ಇದು ಧರ್ಮಸ್ಥಳದ ಅಭಿಮಾನಿಗಳಿಗೆ ಸಂತಸ ನೀಡಿದೆ.
ಮುಸುಕುಧಾರಿಯ ಹೆಸರು ಚೆನ್ನಯ್ಯ ಯಾನೆ ಚೆನ್ನನನ್ನು ಸುಳ್ಳು ದೂರು ನೀಡಿದ ಆರೋಪ ಮತ್ತು ಮೊದಲ ಬುರುಡೆಯನ್ನು ಎಲ್ಲಿಂದ ತಂದ ಎನ್ನುವ ಮಾಹಿತಿ ನೀಡದ ಆರೋಪದಡಿ SIT ಅಧಿಕಾರಿಗಳು ಬಂಧಿಸಿರುವುದಾಗಿದೆ.
ಈತ ಕಟ್ಟಿದ ಬುರುಡೆ ಕಥೆ, ನೂರಾರು ಹೆಣಗಳನ್ನು ಹೂಳಲಾಗಿದೆ ಎನ್ನುವ ಪ್ರಕರಣ ಇಡೀ ದೇಶವನ್ನೇ ಧರ್ಮಸ್ಥಳದತ್ತ ತಿರುಗುವಂತೆ ಮಾಡಿತ್ತು. ಅಲ್ಲದೆ ಈ ವರೆಗೆ ಮಾಸ್ಕ್ ಧರಿಸಿ ತನ್ನ ಗುರುತನ್ನು ಮರೆಮಾಚಿದ್ದ ಮಾಸ್ಕ್ ಮ್ಯಾನ್ ಯಾರು ಎನ್ನುವುದು ಈಗ ಜಗಜ್ಜಾಹೀರಾಗಿದೆ.
ಚೆನ್ನಯ್ಯನ ಬಂಧನವಾಗುತ್ತಿದ್ದ ಹಾಗೆಯೇ ಧರ್ಮಸ್ಥಳದ ಅಭಿಮಾನಿಗಳು, ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.
























