ಮಂಗಳಮುಖಿಯನ್ನೂ ಬಿಡದ ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ!

ಕಿರುಕುಳ ಆರೋಪ ಹೊತ್ತು ರಾಜೀನಾಮೆ ನೀಡಿರುವ ಕಾಂಗ್ರೆಸ್‌ ಯುವ ನಾಯಕನ ಇನ್ನಷ್ಟು ಕರ್ಮಕಾಂಡಗಳು ಬಯಲು

ತಿರುವನಂತಪುರಂ: ಮಲಯಾಳಂ ನಟಿ ರಿನಿ ಆನ್ ಜಾರ್ಜ್ ಅವರಿಗೆ ಕಿರುಕುಳ ನೀಡಿದ ಆರೋಪ ಹೊತ್ತು ಕೇರಳ ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಪದವಿಗೆ ಗುರುವಾರ ರಾಜೀನಾಮೆ ನೀಡಿರುವ ಶಾಸಕ ರಾಹುಲ್‌ ಮಮಕೂಟತ್ತಿಲ್‌ ತೃತೀಯ ಲಿಂಗಿಗೂ ಲೈಂಗಿಕ ಕಿರುಕುಳ ನೀಡಿದ ವಿಚಾರ ಬೆಳಕಿಗೆ ಬಂದಿದೆ.

ನಟಿ ರಿನಿ ಲೈಂಗಿಕ ಕಿರುಕುಳ ಆರೋಪ ಮಾಡಿದ ಬಳಿಕ ಇನ್ನೂ ಹಲವು ಮಹಿಳೆಯರು ರಾಹುಲ್‌ ಮಮಕೂಟತ್ತಿಲ್‌ನ ಕಿರುಕುಳದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಇದೀಗ ಓರ್ವ ಮಂಗಳಮುಖಿಯೂ ಕಾಂಗ್ರೆಸ್ ಶಾಸಕ ರಾಹುಲ್ ಮಮಕೂಟತ್ತಿಲ್ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ತನಗೆ ಕರೆ ಮಾಡಿ ನಿನ್ನ ಮೇಲೆ ಅತ್ಯಾಚಾರ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೇ ಹಲವು ಅಶ್ಲೀಲ ಮಾತುಗಳನ್ನಾಡಿ ಕಿರಕುಳ ನೀಡಿದ್ದಾರೆ. ಬೆಂಗಳೂರು ಅಥವಾ ಹೈದರಾಬಾದ್‌ನಲ್ಲಿ ನಿನ್ನ ಮೇಲೆ ಅತ್ಯಾಚಾರ ಮಾಡಲು ಬಯಸಿದ್ದೇನೆ ಎಂದು ಅವರು ನನಗೆ ಬೆದರಿಕೆ ಹಾಕಿದ್ದರು ಎಂದು ಮಂಗಳಮುಖಿ ಆರೋಪಿಸಿದ್ದಾರೆ.





















































 
 

ಅವಂತಿಕಾ ಎಂದು ಗುರುತಿಸಲ್ಪಟ್ಟ ತೃತೀಯ ಲಿಂಗಿ, ಶಾಸಕ ತಮ್ಮ ಮೇಲೆ ಅತ್ಯಾಚಾರ ಮಾಡಲು ಬಯಸಿರುವುದಾಗಿ ಸಂದೇಶ ಕಳುಹಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಚುನಾವಣೆಯ ಸಮಯದಲ್ಲಿ ನಡೆದ ಚರ್ಚೆಯಲ್ಲಿ ತಾವು ಭೇಟಿಯಾಗಿದ್ದಾಗಿ ಅವಂತಿಕಾ ಹೇಳಿಕೊಂಡಿದ್ದಾರೆ, ನಂತರ ಸಾಮಾಜಿಕ ಮಾಧ್ಯಮದ ಮೂಲಕ ಸಂಪರ್ಕಿಸಿದರು. ಇದು ಸಾಮಾನ್ಯ ಸ್ನೇಹವಾಗಿ ಪ್ರಾರಂಭವಾಯಿತು, ಆದರೆ ಅವರು ಬರಬರುತ್ತಾ ಬಹಳ ಅಸಹ್ಯಕರವಾಗಿ ನಡೆದುಕೊಳ್ಳಲು ಪ್ರಾರಂಭಿಸಿದರು ಎಂದು ಆರೋಪಿಸಿದ್ದಾರೆ.

ರಾಹುಲ್‌ ಮಮಕೂಟತ್ತಿಲ್‌ ಕಳೆದ ಮೂರು ವರ್ಷಗಳಿಂದ ತನಗೆ ಅನುಚಿತ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಮಲಯಾಳಂ ನಟಿ ರಿನಿ ಜಾರ್ಜ್ ನಿನ್ನೆ ಆರೋಪಿಸಿದ್ದಾರೆ. ಆತ ಫೈವ್‌ಸ್ಟಾರ್ ಹೋಟೆಲ್‌ಗೆ ಆಹ್ವಾನಿಸಿದ್ದಾನೆ ಎಂದಿದ್ದಾರೆ. ಆನ್‌ಲೈನ್ ಸಂದರ್ಶನವೊಂದರಲ್ಲಿ ಮಾತನಾಡಿರುವ ರಿನಿ ಜಾರ್ಜ್, ಸಾಮಾಜಿಕ ಜಾಲತಾಣದ ಮೂಲಕ ಈ ರಾಜಕಾರಣಿಯೊಂದಿಗೆ ಸಂಪರ್ಕಕ್ಕೆ ಬಂದೆ. ಮೂರು ವರ್ಷಗಳ ಹಿಂದೆ ಆತನಿಂದ ಅನುಚಿತ ಸಂದೇಶಗಳು ಬಂದವು. ಆತ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸುವ ಆಫರ್ ನೀಡಿದ್ದಾನೆ. ತನ್ನ ದೂರುಗಳನ್ನು ಪಕ್ಷದ ವರಿಷ್ಠರು ನಿರ್ಲಕ್ಷಿಸಿದ್ದಾರೆ, ಆ ಯುವ ನಾಯಕನಿಗೆ ಪಕ್ಷದಲ್ಲಿ ಪ್ರಮುಖ ಸ್ಥಾನಗಳನ್ನು ನೀಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಪಕ್ಷದ ವರಿಷ್ಠರಿಗೆ ಎಚ್ಚರಿಕೆ ನೀಡಿದಾಗ, ಆತ ನೀನು ಯಾರಿಗೆ ಬೇಕಾದರೂ ಹೇಳು ಎಂದು ನಿರ್ಲಕ್ಷ್ಯದಿಂದ ಪ್ರತಿಕ್ರಿಯಿಸಿದ ಎಂದು ರಿನಿ ತಿಳಿಸಿದ್ದಾರೆ. ನಟಿ ರಿನಿ ಆರೋಪ ಕೇರಳ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ ಬಳಿಕ ರಾಹುಲ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

error: Content is protected !!
Scroll to Top