ಸಂಸತ್ತಿನಲ್ಲಿ ಮತ್ತೆ ಭದ್ರತಾ ಲೋಪ : ಗೋಡೆ ಹಾರಿ ಒಳನುಗ್ಗಿದ ವ್ಯಕ್ತಿ

ಮರ ಏರಿ ಆವರಣದೊಳಗೆ ಜಿಗಿದು ಒಳ ನುಗ್ಗಿದ್ದ ಆಗಂತುಕನ ತೀವ್ರ ವಿಚಾರಣೆ

ನವದೆಹಲಿ : ಹೊಸ ಸಂಸತ್ ಭವನದಲ್ಲಿ ಮತ್ತೊಮ್ಮೆ ಭದ್ರತಾ ವೈಫಲ್ಯ ಸಂಭವಿಸಿದೆ. ವ್ಯಕ್ತಿಯೊಬ್ಬ ಮರವನ್ನು ಬಳಸಿ ಗೋಡೆ ದಾಟಿ ಸಂಸತ್ತಿನ ಆವರಣ ಪ್ರವೇಶಿಸಿದ್ದಾನೆ. ಈ ಘಟನೆ ಬೆಳಗ್ಗೆ 6.30ಕ್ಕೆ ನಡೆದಿದ್ದು, ಆತ ರೈಲು ಭವನ ಮೂಲಕವಾಗಿ ಗರುಡ ದ್ವಾರದ ತನಕ ತಲುಪಿದ್ದಾನೆ. ಅಲ್ಲಿದ್ದ ಭದ್ರತಾ ಸಿಬ್ಬಂದಿ ಅವನನ್ನು ಹಿಡಿದು ಪ್ರಶ್ನಿಸಿ ಬಳಿಕ ಬಂಧಿಸಿದ್ದಾರೆ. ಆತನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಸತ್ತಿನ ಮುಂಗಾರು ಅಧಿವೇಶನ ಹಲವು ಗದ್ದಲಗಳ ನಡುವೆ ಮುಕ್ತಾಯಗೊಂಡಿದ್ದು, ಇದಾದ ಒಂದು ದಿನದ ಬಳಿಕ ಈ ಘಟನೆ ನಡೆದಿದೆ.





















































 
 

ಕಳೆದ ವರ್ಷವೂ ಇದೇ ರೀತಿಯ ಭದ್ರತಾ ವೈಫಲ್ಯ ಸಂಭವಿಸಿದ್ದು, ವ್ಯಕ್ತಿಯೊಬ್ಬ ಸಂಸತ್ತಿನ ಗೋಡೆಯನ್ನು ಹಾರಿ ಅನೆಕ್ಸ್ ಕಟ್ಟಡದ ಆವರಣದೊಳಗೆ ಹಾರಿದ್ದ. ಘಟನೆಯ ವೀಡಿಯೊ ಸಹ ಕಾಣಿಸಿಕೊಂಡಿದ್ದು, ಅದರಲ್ಲಿ ಶಾರ್ಟ್ಸ್ ಮತ್ತು ಟಿ-ಶರ್ಟ್ ಧರಿಸಿದ್ದ ಶಂಕಿತನನ್ನು ಸಶಸ್ತ್ರ ಸಿಐಎಸ್ಎಫ್ ಸಿಬ್ಬಂದಿ ಹಿಡಿದಿಟ್ಟುಕೊಂಡಿರುವುದನ್ನು ಕಾಣಬಹುದು. ತಪಾಸಣೆಯ ಸಮಯದಲ್ಲಿ ಆ ವ್ಯಕ್ತಿಯ ಯಾವುದೇ ಅಪರಾಧ ಸಾಬೀತಾಗಿಲ್ಲ.

2023ರಲ್ಲಿ ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿಯ ವಾರ್ಷಿಕ ದಿನದಂದು ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳು ಶೂನ್ಯ ವೇಳೆಯಲ್ಲಿ ಸಾರ್ವಜನಿಕ ಗ್ಯಾಲರಿಯಿಂದ ಲೋಕಸಭಾ ಕೊಠಡಿಗೆ ಹಾರಿದ್ದರು. ಅದೇ ಸಮಯದಲ್ಲಿ ಇತರ ಇಬ್ಬರು ಆರೋಪಿಗಳಾದ ಅಮೋಲ್ ಶಿಂಧೆ ಮತ್ತು ನೀಲಂ ಆಜಾದ್ ಅವರು ಸಂಸತ್ತಿನ ಆವರಣದೊಳಗೆ ಬಂದು ಸರ್ವಾಧಿಕಾರ ನಡೆಯಲು ಬಿಡುವುದಿಲ್ಲ ಎಂದು ಹೇಳಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಮಹೇಶ್ ಕುಮಾವತ್ ಮತ್ತು ಲಲಿತ್ ಝಾ ಎಂಬ ಇನ್ನಿಬ್ಬರನ್ನು ಸಹ ಬಂಧಿಸಲಾಗಿತ್ತು.

error: Content is protected !!
Scroll to Top