ನವದೆಹಲಿ: ಪಾಕಿಸ್ತಾನದ ವಿರುದ್ಧ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ದೇಶದ ರಕ್ಷಣಾ ನೀತಿಯಲ್ಲಿ ಹೊಸ ರೇಖೆಯನ್ನು ಎಳೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯ ಮೂಲಕ ಭಾರತ ಯಾವುದೇ ಶತ್ರುಗಳನ್ನು ಶಿಕ್ಷಿಸದೆ ಬಿಡುವುದಿಲ್ಲ. ಹಾಗೆಯೇ ಉಗ್ರರು ಯಾವುದೇ ನರಕದಲ್ಲಿ ಅವಿತಿದ್ದರೂ ಭಾರತದ ಕ್ಷಿಪಣಿಗಳು ಅವರನ್ನು ಹೊಡೆದುರುಳಿಸುತ್ತವೆ ಎನ್ನುವ ಸ್ಪಷ್ಟ ಸಂದೇಶವನ್ನು ರವಾನೆ ಮಾಡಿದೆ ಎಂದು ಹೇಳಿದ್ದಾರೆ.
ಪಹಲ್ಗಾಮ್ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ನಡೆದ ಭಯೋತ್ಪಾದಕ ದಾಳಿಯ ಸಮಯದಲ್ಲಿ ಉಗ್ರರನ್ನು ಭೂಮಿಯಿಂದ ಧೂಳೀಪಟ ಮಾಡುವ ಪ್ರತಿಜ್ಞೆ ಮಾಡಿದ್ದೆ. ಆ ಸಂಕಲ್ಪ ನನಸಾಗಿರುವುದನ್ನು ಇಡೀ ಪ್ರಪಂಚವೇ ನೋಡಿದೆ ಎಂದು ಅವರು ನುಡಿದಿದ್ದಾರೆ.
























