ಈ ಬಾರಿಯ ದಸಾರದಲ್ಲಿ ‌ರಾರಾಜಿಸಲಿದೆಯೇ ಏರ್ ಶೋ?

ಮೈಸೂರು: ಈ ಬಾರಿಯ ನಾಡ ಹಬ್ಬ ದಸರಾ ಹಬ್ಬದ ಮೆರುಗು ಹೆಚ್ಚಿಸುವ ಸಲುವಾಗಿ ವೈಮಾನಿಕ ಪ್ರದರ್ಶನ (ಏರ್ ಶೋ) ಆಯೋಜನೆ ಮಾಡಲಾಗುತ್ತಿದೆ.

ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಬರೆದಿರುವ ಧನ್ಯವಾದ ಪತ್ರದಲ್ಲಿ ಈ ಮಾಹಿತಿ ಲಭ್ಯವಾಗಿದೆ. ಆದರೆ ಈ ಏರ್ ಶೋ ಎಲ್ಲಿ ಮತ್ತು ಯಾವಾಗ ಆಯೋಜನೆ ಮಾಡಲಾಗುತ್ತದೆ ಎನ್ನುವ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ‌.

ಎರಡು ತಿಂಗಳ ಹಿಂದೆ ಈ ವಿಷಯಕ್ಕೆ ಸಂಬಂಧಿಸಿದ ಹಾಗೆ ಸಿಎಂ ಸಿದ್ದರಾಮಯ್ಯ ಅವರು ರಕ್ಷಣಾ ಸಚಿವರನ್ನು ಭೇಟಿಯಾಗಿ ಖುದ್ದಾಗಿ ಮನವಿ ಸಲ್ಲಿಸಿದ್ದರು. ರಾಜನಾಥ ಸಿಂಗ್ ಅವರು ಸಹ ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದರು. ದಸರಾ ಉತ್ಸವಕ್ಕೂ ರಾಜನಾಥ್ ಸಿಂಗ್ ಅವರಿಗೆ ಸಿಎಂ ಆಹ್ವಾನ ನೀಡಿದ್ದಾಗಿ ತಿಳಿದು ಬಂದಿದೆ.





















































 
 
error: Content is protected !!
Scroll to Top