ಆಲಂಕಾರು: ಹಿಂದೂ ಜಾಗರಣ ವೇದಿಕೆ ಆಲಂಕಾರು ಆಶ್ರಯದಲ್ಲಿ ಮೊಸರು ಕುಡಿಕೆ ಉತ್ಸವ ಸಮಿತಿ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 10ನೇ ವರ್ಷದ ಅಟ್ಟಿ ಮಡಿಕೆ ಒಡೆಯುವ ಉತ್ಸವ ಆ.23 ಶನಿವಾರ ಮಧ್ಯಾಹ್ನ 2 ರಿಂದ ಆಲಂಕಾರು ಪೇಟೆಯಲ್ಲಿ ನಡೆಯಲಿದೆ.
ಉತ್ಸವಕ್ಕೆ ಮಧ್ಯಾಹ್ನ 2 ಗಂಟೆಗೆ ಆಲಂಕಾರು ಮಾನಸ ಚಿಕಿತ್ಸಾಲಯದ ಡಾ.ಹರಿದಾಸ್ ಭಟ್ ಚಾಲನೆ ನೀಡಲಿದ್ದಾರೆ.
ಸಂಜೆ 5.30 ಕ್ಕೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಆಲಂಕಾರು ಅಟ್ಟಿಮಡಿಕೆ ಉತ್ಸವ ಸಮಿತಿ ಅಧ್ಯಕ್ಷ ದಾಮೋಧರ್ ಆಚಾರ್ಯ ಆಲಂಕಾರು ವಹಿಸಲಿದ್ದು, ಪುಣ್ಚಪ್ಪಾಡಿ ಸಮರ್ಥ್ ಜನಸೇವಾ ಅಧ್ಯಕ್ಷ ಗಿರಿಶಂಕರ ಸುಲಾಯ ಬೌದ್ಧಿಕ್ ನೀಡಲಿದ್ದಾರೆ. ಶ್ರೀ ಕ್ಷೇತ್ರ ಶರವೂರು ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಹೇಮಂತ್ ರೈ, ಹಿಂದೂ ಜಾಗರಣ ವೇದಿಕೆ ಆಲಂಕಾರು ಘಟಕ ಸಂಯೋಜಕ ರಿತೇಶ್ ಭಂಡಾರಿ, ಆಲಂಕಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿ ಕುಂಞಲಡ್ಡ ಉಪಸ್ಥಿತರಿರುವರು. ಸಮಾರಂಭದಲ್ಲಿ ಮಹಾಬಲ ಗೌಡ ಕಕ್ವೆ, ಸುರೇಶ್ ಪಡಿಪಂಡ, ಮಲ್ಲೇಶ್ ನಗ್ರಿ, ಧನಂಜಯ ಕಜೆ, ದಿನೇಶ್ ಕೇಪುಳು, ರಘುನಾಥ ಕೋಡ್ಲ ಅವರನ್ನು ಸನ್ಮಾನಿಸಲಾಗುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
























