ಪ್ರಧಾನಿ ಮೋದಿ ಸರ್ಕಾರದ ಮಸೂದೆಗೆ ಬೆಂಬಲ ಸೂಚಿಸಿದ ಶಶಿ ತರೂರ್

ಮತ್ತೆ ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾದ ತರೂರ್

ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ಮಜುಗರವಾಗುವಂತೆ ಈ ಹಿಂದೆಯೂ ಹಲವಾರು ಬಾರಿ ನಡೆದುಕೊಂಡಿರುವ ಶಶಿ ತರೂರ್ ಈಗ ಮತ್ತೊಮ್ಮೆ ಸ್ವಪಕ್ಷದ ‌ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕೇಂದ್ರದ ಪ್ರಧಾನಿ ಮೋದಿ ಸರ್ಕಾರ ಮಂಡನೆ ಮಾಡಿದ ಕ್ರಿಮಿನಲ್ ಪ್ರಕರಣಗಳಲ್ಲಿ ಸತತ ಮೂವತ್ತು ದಿನಗಳ ವರೆಗೆ ಬಂಧನಕ್ಕೆ ಒಳಗಾಗುವ ಪ್ರಧಾನಿ, ಮುಖ್ಯಮಂತ್ರಿಗಳು ಸೇರಿದಂತೆ ಕೇಂದ್ರ ಮತ್ತು ರಾಜ್ಯಗಳ ಸಚಿವರನ್ನು ಸಾಂವಿಧಾನಿಕ ಸ್ಥಾನದಿಂದ ಪದಚ್ಯುತಿ ಮಾಡುವ ಮಸೂದೆಯನ್ನು ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳು ವಿರೋಧಿಸಿವೆ. ಆದರೆ ಕಾಂಗ್ರೆಸ್ ನಾಯಕ ಶಶಿ ತರೂರ್ ಮಾತ್ರ ಈ ಮಸೂದೆಗೆ ಮೆಚ್ಚುಗೆ ಸೂಚಿಸುವ ಮೂಲಕ ಸ್ವಪಕ್ಷೀಯರ ಆಕ್ರೋಶಕ್ಕೆ ಮತ್ತೆ ತುತ್ತಾಗಿದ್ದಾರೆ‌.





















































 
 

ಈ ಮಸೂದೆಗೆ ಶಶಿ ತರೂರ್ ಬೆಂಬಲ ಸೂಚಿಸಿದ್ದಾರೆ. ಹಾಗೆಯೇ ಇದು ಬಹಳ ಔಚಿತ್ಯಪೂರ್ಣ ಮಸೂದೆ ಎಂದಿದ್ದಾರೆ. ನಾನು ಈ‌ ವಿಧೇಯಕದ ಕರಡು ಪ್ರತಿಯನ್ನು ಓದಿಲ್ಲ. ಆದರೆ ಮಾಧ್ಯಮಗಳಲ್ಲಿ ಬಂದ ವರದಿಯನ್ನು ನೋಡಿದ್ದೇನೆ. ಈ ವಿದೇಯಕದ ಹಿಂದಿನ ಉದ್ದೇಶ ಅರಿವಾಗಿರು‌ವ ಕಾರಣ ಇದನ್ನು ಬೆಂಬಲಿಸಿದ್ದೇನೆ ಎಂದಿದ್ದಾರೆ.

error: Content is protected !!
Scroll to Top