ಸವಣೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2024-25 ನೇ ಸಾಲಿನಲ್ಲಿ 412.92 ಕೋಟಿ ವಾರ್ಷಿಕ ವ್ಯವಹಾರ ನಡೆಸಿದೆ. ಸಂಘದ ಆಡಿಟ್ ನಡೆದು ಸತತ 23ನೇ ಬಾರಿಗೆ “ಎ” ತರಗತಿ ಆಡಿಟ್ ವರ್ಗೀಕರಣಣದೊಂದಿಗೆ ಶೇಕಡಾ 99.25% ಸಾಲ ವಸೂಲಾತಿಯೊಂದಿಗೆ ರೂ 1.67 ಕೋಟಿ ಲಾಭಗಳಿಸಿದೆ. ಸಂಘವು ಸತತ 13 ವರ್ಷಗಳಿಂದ ಡಿಸಿಸಿ ಬ್ಯಾಂಕ್ ಪ್ರಶಸ್ತಿಗೆ ಭಾಜನವಾಗಿದೆ ಎಂದು ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ತಿಳಿಸಿದ್ದಾರೆ.
ಸಂಘದಲ್ಲಿ 3525 ಸದಸ್ಯರಿದ್ದು, ರೂ. 5.72 ಕೋಟಿ ಪಾಲುಬಂಡವಾಳ ಮತ್ತು ರೂ. 40.34 ಕೋಟಿ ಠೇವಣಿ ಸಂಗ್ರಹಿಸಲಾಗಿದೆ., ವರದಿ ವರ್ಷದಲ್ಲಿ ಅಲ್ಪಾವಧಿ, ಮಧ್ಯಮಾವಧಿ, ದೀರ್ಘಾವಧಿ ಕೃಷಿ ಸಾಲ, ಕೃಷಿಯೇತರ ಸಾಲ, ಚಿನ್ನಾಭರಣ ಈಡಿನ ಸಾಲ, ಸ್ವಸಹಾಯ ಗುಂಪು ಸಾಲ, ಇತ್ಯಾದಿಗಳಿಗೆ ರೂ 66.10 ಕೋಟಿ ಸಾಲ ವಿತರಿಸಲಾಗಿದೆ. ಕೇಂದ್ರ ಬ್ಯಾಂಕಿನಿಂದ ರೂ. 34.30 ಕೋಟಿ ಸಾಲ ಪಡೆಯಲಾಗಿದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸುಮಾರು 17 ಸದಸ್ಯರಿಗೆ ತಲಾ ರೂ. 5000/-ದಂತೆ ರೂ. 85,000 ವಿತರಿಸಲಾಗಿದೆ, ನವೋದಯದ ಚೈತನ್ಯ ವಿಮಾ ಯೋಜನೆಯಡಿ 11 ಸದಸ್ಯರಿಗೆ ರೂ. 51,319- ಕೈಂ ಬಂದಿರುತ್ತದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.
ಮಾಸ್, ಮಂಗಳೂರು ಇವರ ಸಹಯೋಗದೊಂದಿಗೆ ರೈತರ ರೂ.4.90 ಕೋಟಿ ಮೌಲ್ಯದ 1,238.42 ಕ್ವಿಂಟಾಲ್ ಅಡಿಕೆ ಖರೀದಿಸಲಾಗಿದೆ, ಬ್ಯಾಂಕಿಂಗ್ ವ್ಯವಹಾರದ ಜೊತೆಗೆ ರಸಗೊಬ್ಬರ ಮತ್ತು ರಾಜ್ಯ ಸರಕಾರಗಳ ಪಡಿತರ ವ್ಯವಸ್ಥೆಯನ್ನು 4 ಪಡಿತರ ಶಾಖೆಗಳಲ್ಲಿ ವಿತರಿಸಲಾಗುತ್ತಿದೆ. ಗ್ರಾಹಕರ ಅನುಕೂಲತೆಗಾಗಿ RTGS /NEFT ಸೌಲಭ್ಯ ಕಲ್ಪಿಸಲಾಗಿದೆ, ಸಂಘದ ಬೆಳವಣಿಗೆಯಲ್ಲಿ ಸಹಕರಿಸಿದ ಸರ್ವ ಸದಸ್ಯರಿಗೆ ಮತ್ತು ಠೇವಣಿದಾರರಿಗೆ ಕೃತಜ್ಞತೆಗಳನ್ನು ಅಧ್ಯಕ್ಷರಾದ ತಾರಾನಾಥ ಕಾಯರ್ಗ ತಿಳಿಸಿದ್ದಾರೆ.
ಆ. 24 ರಂದು ವಾರ್ಷಿಕ ಮಹಾಸಭೆ :
ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಆ.24 ರಂದು ಸಂಘದ ಸಭಾಂಗಣದಲ್ಲಿ ನಡೆಯಲಿದೆ. ಪ್ರತಿವರ್ಷದಂತೆ ಈ ವರ್ಷ ಕೂಡ ಸಂಘದ ಕಾರ್ಯವ್ಯಾಪ್ತಿಯ ಸದಸ್ಯರ ಮನೆಯ ಮಕ್ಕಳಿಗೆ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ ಶೇಕಡಾ 90% ಕ್ಕಿಂತ ಹೆಚ್ಚು ಮತ್ತು ಡಿಗ್ರಿಯಲ್ಲಿ ಶೇಕಡಾ 80% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಧನದೊಂದಿಗೆ ಪುರಸ್ಕರಿಸಲಾಗುವುದು. ಎಂದು ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು ಮತ್ತು ಮುಖ್ಯ,ಕಾರನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ. ತಿಳಿಸಿದ್ದಾರೆ.
ರೈತರ ಪಾಲಿಗೆ ವರದಾನವಾಗಿರುವ 2025-26 ನೇ ಸಾಲಿನ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ಸಂಘದಲ್ಲಿ 2152 ಸದಸ್ಯರು ರೂ. 67.50 ಲಕ್ಷ ಪ್ರೀಮಿಯಂ ಪಾವತಿಸಿದ್ದಾರೆ. 843 ಕುಟುಂಬದ 3100 ಸದಸ್ಯರನ್ನು ಯಶಸ್ಸಿನಿ ಅರೋಗ್ಯ ವಿಮಾ ಯೋಜನೆಗೆ ನೋಂದಾಯಿಸಲಾಗಿದೆ.
- ತಾರಾನಾಥ ಕಾಯರ್ಗ, ಅಧ್ಯಕ್ಷರು ಸವಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ
























