ಪುತ್ತೂರು: ವಿದ್ಯಾಭಾರತಿ ದಕ್ಷಿಣ ಕನ್ನಡದ ವತಿಯಿಂದ ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಯು ಶ್ರೀ ಭಾರತಿ ವಿದ್ಯಾಸಂಸ್ಥೆ ಅಲಂಕಾರು ಇದರ ಆಶ್ರಯದಲ್ಲಿ ಶ್ರೀ ಭಾರತಿ ಪ್ರೌಢ ಶಾಲೆಯಲ್ಲಿ ನಡೆದಿದ್ದು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದಿರುತ್ತಾರೆ.
ಬಾಲಕಿಯರ ವಿಭಾಗದಲ್ಲಿ ಅಭಿಜ್ಞಾ ಶಾಂಭವಿ 8ನೇ ಪ್ರಥಮ ಸ್ಥಾನ, ಬಾಲಕರ ವಿಭಾಗದಲ್ಲಿ ಪ್ರಥಮ್.ಎಂ 8ನೇ ತರಗತಿ ಪ್ರಥಮ ಸ್ಥಾನ ಹಾಗೂ ರಂಜಿತ್ ಪ್ರಭು 8ನೇ ತರಗತಿ ಪ್ರಥಮ ಸ್ಥಾನ ಪಡೆದು ಸೆಪ್ಟೆಂಬರ್ 6 ಮತ್ತು 7ರಂದು ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ಬಾಲಕರ ವಿಭಾಗದಲ್ಲಿ ತೇಜಸ್ವಿ.ಡಿ.ವಿ, 8ನೇ ತರಗತಿ ಮತ್ತು ಯಶಸ್.ಎಚ್.ಆರ್ ರೈ, 7ನೇ ತರಗತಿ ತೃತೀಯ ಸ್ಥಾನ ಹಾಗೂ ಬಾಲಕಿಯರ ವಿಭಾಗದಲ್ಲಿ ಸಿರಿ ಹಳೇಮನೆ, 9ನೇ ತರಗತಿ ದ್ವಿತೀಯ ಸ್ಥಾನ ಹಾಗೂ ಮಹತಿ.ಎಂ, 8ನೇ ತರಗತಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ ಎಂದು ಶಾಲಾ ಮುಖ್ಯ ಶಿಕ್ಷಕರು ತಿಳಿಸಿದ್ದಾರೆ.
























