ಪ್ರಧಾನಿ, ಮುಖ್ಯಮಂತ್ರಿ ಪದಚ್ಯುತಿ ಮಸೂದೆ ಮಂಡನೆ: ವಿಪಕ್ಷಗಳಿಂದ ‌ಸದನದ ಬಾವಿಗಿಳಿದು ಪ್ರತಿಭಟನೆ

ನವದೆಹಲಿ: ಪ್ರಧಾನಿ, ಮುಖ್ಯಮಂತ್ರಿಗಳು, ಸಚಿವರು ಯಾರೇ ಆಗಿರಲಿ‌, ಅವರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಲ್ಲಿ ಅಥವಾ ಮೂವತ್ತು ದಿನಗಳಿಗಿಂತ ಹೆಚ್ಚು ಸಮಯ ಜೈಲು ಶಿಕ್ಷೆ ಅನುಭವಿಸಿದ್ದಲ್ಲಿ ಅಂತಹವರನ್ನು ಪದಚ್ಯುತಗೊಳಿಸುವ ನಿಬಂಧನೆಯೊಂದಿಗೆ ಹೊಸ ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಡನೆ ಮಾಡಿದ್ದಾರೆ.

ಈ ಮಸೂದೆ ಮಂಡನೆಯಾಗುತ್ತಿದ್ದಂತೆ ವಿಪಕ್ಷ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟಿಸಿದ್ದು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇನ್ನೂ ಕೆಲವು ಮಂದಿ ಮಸೂದೆಯ ಪ್ರತಿಯನ್ನು ಹರಿದು ಅಮಿತ್ ಶಾ ಅವರ ಮೇಲೆಸೆದು ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಮಸೂದೆಯ ವಿರುದ್ಧ ಅಸಾವುದ್ದೀನ್ ಒವೈಸಿ, ಕಾಂಗ್ರೆಸ್ ಪಕ್ಷದ ಮನೀಶ್ ತಿವಾರಿ, ಕೆ.ಸಿ. ವೇಣುಗೋಪಾಲ್ ಸೇರಿದಂತೆ ಮತ್ತಿತರರು ಮಾತನಾಡಿದ್ದು, ಇದು ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದದ್ದು ಎಂದು ಟೀಕೆ ಮಾಡಿದ್ದಾರೆ.





















































 
 
error: Content is protected !!
Scroll to Top