ಕರಾವಳಿಯಲ್ಲಿ ಕೋಮು ಸೌಹಾರ್ದತೆ ಕಾಪಾಡಲು ಸರ್ಕಾರದ ನಿರ್ಲಕ್ಷ್ಯ – ವಿಧಾನ ಪರಿಷತ್ತಿನಲ್ಲಿ ಕಿಶೋರ್ ಕುಮಾರ್ ಪುತ್ತೂರು ಆಕ್ರೋಶ

ಬೆಂಗಳೂರು: ವಿಧಾನ ಪರಿಷತ್‍ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಇಂದು ತಮ್ಮ ಚುಕ್ಕಿ ಗುರುತಿನ ಪ್ರಶ್ನೆಯಲ್ಲಿ ಸ್ಪೆಷಲ್ ಆಕ್ಷನ್ ಫೋರ್ಸ್ (SAF) ಕುರಿತು ಗೃಹ ಸಚಿವರಿಗೆ ಪ್ರಶ್ನೆ ಕೇಳಿದರು. ಕರಾವಳಿಯಲ್ಲಿ ನಡೆಯುತ್ತಿರುವ ಕೋಮು ಅಶಾಂತಿ ಪ್ರಕರಣಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ತೋರಿಸುತ್ತಿರುವ ನಿರ್ಲಕ್ಷ್ಯವನ್ನು ಅವರು ತೀವ್ರವಾಗಿ ಟೀಕಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕರಾವಳಿಯಲ್ಲಿ ಕೋಮು ಸೌಹಾರ್ದತೆ ಬೇಕು ಎನ್ನುವ ಆಸಕ್ತಿ ಏಕಿಲ್ಲ ಎನ್ನುವುದು ವಿಪರ್ಯಾಸವಾಗಿದೆ. ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರನ್ನು ಹತ್ತಾರು ಜನರು ಸುತ್ತುವರಿದು ಕ್ರೂರವಾಗಿ ಹತ್ಯೆಗೈಯುತ್ತಾರೆ. ಆದರೆ ಉಸ್ತುವಾರಿ ಸಚಿವರಾಗಲಿ, ಗೃಹ ಸಚಿವರಾಗಲಿ ಅವರ ಮನೆಗೆ ಭೇಟಿ ನೀಡುವುದಿಲ್ಲ. ಗೋಮಾತೆಯನ್ನು ಕದ್ದೊಯ್ಯುವ ಮತಾಂಧರು ಪೊಲೀಸರ ಮೇಲೆಯೇ ಹಲ್ಲೆ ನಡೆಸಲು ಯತ್ನಿಸಿದರೂ, ಗೃಹ ಸಚಿವರು ತುಟಿಪಿಟಿಕಿಸುವುದಿಲ್ ಎಂದು ಶಾಸಕ ಕಿಶೋರ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು

ಅವರು ಇತ್ತೀಚಿನ ಘಟನೆಗೆ ಉದಾಹರಣೆಯಾಗಿ, ನಿನ್ನೆ ಗುರುವಾಯನಕೆರೆಯಲ್ಲಿ ಇನ್ನೋವಾ ಕಾರಿನಲ್ಲಿ ನಡೆದ ಗೋವು ಕಳ್ಳತನ ಪ್ರಕರಣವನ್ನು ಉಲ್ಲೇಖಿಸಿದರು. ಅಪರಾಧಿಗಳು ಪೊಲೀಸರ ಮೇಲೆಯೇ ಕೈ ಎತ್ತುವ ಮಟ್ಟಿಗೆ ಹೋಗಿರುವುದು ಗಂಭೀರ ವಿಚಾರ. ಇಂತಹ ಘಟನೆಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚುವ ತಾರತಮ್ಯ ಮಾಡಬಾರದು ಎಂದು ಗೃಹ ಸಚಿವರಿಗೆ ಮನವಿ ಮಾಡಿದರು.





















































 
 

ಇದರ ಜೊತೆಗೆ, ಕೊಪ್ಪಳದ ಗವಿ ಸಿದ್ದಪ್ಪ ಹತ್ಯೆ ಪ್ರಕರಣ ಮತ್ತು ನಾಗಮಂಗಲದಲ್ಲಿ ನಡೆದ ಕೋಮು ಗಲಭೆಗಳನ್ನೂ ಉಲ್ಲೇಖಿಸಿ, ಅಲ್ಲಿ ಸಹ SAF ಘಟಕಗಳನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಒತ್ತಾಯಿಸಿದರು.

ಗೃಹ ಸಚಿವರು ಪ್ರತಿಕ್ರಿಯೆ ನೀಡುತ್ತಾ, ಗೋವು ಕಳ್ಳತನದಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಹಾಗೂ ಅಗತ್ಯವಿದ್ದಲ್ಲಿ SAF ವ್ಯಾಪ್ತಿಯಲ್ಲಿ ತರುವುದಾಗಿ ಭರವಸೆ ನೀಡಿದರು. ಜೊತೆಗೆ, SAF ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ನೀಡಲಾಗುತ್ತಿದೆ ಮತ್ತು ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ SAF ಕಾರ್ಯವ್ಯಾಪ್ತಿ ಈಗಾಗಲೇ ಇರುವುದಾಗಿ ತಿಳಿಸಿದರು.

error: Content is protected !!
Scroll to Top