ಪುತ್ತೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ರವರಿಗೆ ಏಕವಚನದಲ್ಲಿ ಮಾತನಾಡಿರುವುದಲ್ಲದೆ ಹೆಣ್ಣು ಮಕ್ಕಳ ಬಗ್ಗೆ ಅವಮಾನ ರೀತಿಯಲ್ಲಿ ಮಾತನಾಡಿ ಗುಂಪು ಘರ್ಷಣೆಗೆ ಪ್ರಚೋದನೆ ನೀಡಿರುವ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಪುತ್ತೂರು ಬಿಜೆಪಿಯಿಂದ ಪುತ್ತೂರು ನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.
ಮಹೇಶ್ ತಿಮರೋಡಿಯವರು ಸಾಮಾಜಿಕ ಜಾಲತಾಣದಲ್ಲಿ ಮಾತನಾಡುವ ಸಮಯದಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ಅವರನ್ನು ಅವಿವೇಕಿ, ಪಾಪಿ ಎಂದು ನಿಂಧಿಸಿದಲ್ಲದೆ ಶಿವಮೊಗ್ಗ, ಪುತ್ತೂರು, ಬೆಂಗಳೂರು, ದೆಹಲಿಯಲ್ಲಿ ಹೆಣ್ಣು ಮಕ್ಕಳೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆಂದು ಆರೋಪಿಸಿರುತ್ತಾರೆ. ಅವಿವಾಹಿತರಾಗಿ ಬರೀ ಸಂಘಟನೆ ಮತ್ತು ಪಕ್ಷಕ್ಕಾಗಿ ದುಡಿದ ಧೀಮಂತ ನಾಯಕ ಬಿ.ಎಲ್ ಸಂತೋಷ್ ರವರಿಗೆ ದೆಹಲಿಯಲ್ಲಿ ಮಗು ಇದ್ದು ಅದು ದೆಹಲಿಯಲ್ಲಿ ಓಡಾಡುತ್ತಿದ್ದೆ ಎಂದು ಗಂಭೀರ ಆರೋಪವನ್ನು ಮಾಡಿರುತ್ತಾರೆ. ಅಲ್ಲದೆ ಬಿ.ಎಲ್ ಸಂತೋಷ್ ರವರು ಸಂಘಟನೆ ಮಾಡುವ ಬದಲು ಮನೆ ಮನೆಗೆ ಹೋಗಿ ಹೆಣ್ಣು ಮಕ್ಕಳ ಮುಖ ಹೇಗಿದೆ, ಪೌಡರ್ ಹಾಕಿದ್ದಾರ ಎಂದು ನೋಡುತ್ತಾರೆ ಮತ್ತು ಬಿ.ಎಲ್ ಸಂತೋಷ್ ಡೀಲ್ ಮಾಡಿ ಬಿಜೆಪಿಯನ್ನು ಸೋಲಿಸಿರುತ್ತಾರೆ ಎಂದು ಆರೋಪಿಸಿರುತ್ತಾರೆ.
ಬಿ.ಎಲ್ ಸಂತೋಷ್ ರವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂಧಿಸಿದ ಮತ್ತು ಹೆಣ್ಣು ಮಕ್ಕಳನ್ನು ಇಟ್ಟುಕೊಂಡಿದ್ದಾರೆ ಎಂದು ಹೇಳಿ ಮಹಿಳೆಯರ ಮಾನಕ್ಕೆ ದಕ್ಕೆ ಬರುವ ರೀತಿ ಮಾತನಾಡಿದ ಮತ್ತು ಡೀಲ್ ಮಾಡುವ ಮೂಲಕ ಬಿಜೆಪಿಯನ್ನು ಸೋಲಿಸಿದ್ದಾರೆಂದು ಹೇಳಿ ಪಕ್ಷದೊಳಗೆ ಘರ್ಷಣೆಗೆ ಪ್ರಚೋದನಾಕಾರಿಯಾಗಿ ಮಾತನಾಡಿದ್ದಾರೆ. ಇದರಿಂದ ಅಲ್ಲಲ್ಲಿ ಪಕ್ಷದೊಳಗೆ ಗುಂಪು ಘರ್ಷಣೆ ಆಗುವ ಸಾಧ್ಯತೆ ಇರುವುದರಿಂದ ಮಹೇಶ್ ತಿಮರೊಡ್ಡಿಯನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ನಗರ ಸಭಾ ಅಧ್ಯಕ್ಷೆ ಲೀಲಾವತಿ, ಸದಸ್ಯರಾದ ಗೌರಿ ಬನ್ನೂರು, ಮನೋಹರ್ ಕಲ್ಲಾರೆ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಯುವ ಮೋರ್ಚಾ ಉಪಾಧ್ಯಕ್ಷ ಪವನ್ ಶೆಟ್ಟಿ ಕಂಬಳತ್ತಡ್ಡ, ಟೌನ್ ಬ್ಯಾಂಕ್ ಉಪಾಧ್ಯಕ್ಷ ಶ್ರೀಧರ ಗೌಡ ಕಣಜಾಲು, ನ್ಯಾಯವಾದಿ ಮಾಧವ ಪೂಜಾರಿ, ಗ್ರಾಮಾಂತರ ಮಂಡಲದ ಮಾಜಿ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ, ಎಸ್ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಹರಿಶ್ ಬಿಜತ್ರೆ, ಪಕ್ಷದ ಪ್ರಮುಖರಾದ ಹರಿಪ್ರಸಾದ್ ಯಾದವ್, ನಿತಿಶ್ ಶಾಂತಿವನ, ವಿಶ್ವನಾಥ ಕುಲಾಲ್, ನಾಗೇಶ್ ಟಿ.ಎಸ್., ಸುರೇಶ್ ಆಳ್ವ, ನಾಗೇಶ್ ಟಿ.ಎಸ್., ವಿಶಾಖ್ ರೈ ಮೊದಲಾದವರು ಉಪಸ್ಥಿತರಿದ್ದರು.
























