ಕೆಮ್ಮಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ  ಶ್ರೀಮದ್ಭಾಗವತ ಸಪ್ತಾಹ

ಪುತ್ತೂರು: ಜೀವನದಲ್ಲಿ ಪ್ರತಿಯೊಬ್ಬರು ಒಮ್ಮೆಯಾದರ ಶ್ರೀಮದ್ಭಾಗವತವನ್ನು ಹೇಳಬೇಕು ಎಂದು ಜಿಎಲ್ ಸಮೂಹ ಸಂಸ್ಥೆಗಳ ಮಾಲಕ ಜಿ.ಎಲ್.ಬಲರಾಮ ಉಚಾರ್ಯ ಹೇಳಿದರು.

ಶಿವಳ್ಳಿ ಸಂಪದ ಬೊಳುವಾರು ವಲಯ ವತಿಯಿಂದ ಕೆಮ್ಮಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ  ಶ್ರೀಮದ್ಭಾಗವತ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.

ಇಂತಹ ಸಪ್ತಾಹ ಕಾರ್ಯಕ್ರಮಗಳ ಉದ್ಘಾಟನೆಗೆ ಸಾಮಾನ್ಯವಾಗಿ ಜನರು ಕಡಿಮೆ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಇಂದು ಹೆಚ್ಚಿನ ಸಂಖ್ಯೆಯಲ್ಲಿ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದಾರೆ. ಇದು ಅವರಲ್ಲಿನ ಆಸಕ್ತಿಯನ್ನು ತೋರಿಸುತ್ತದೆ. ಇಂತಹ ಉತ್ತಮವಾದ ಕಾರ್ಯಕ್ರಮಗಳು ಆಧ್ಯಾತ್ಮಿಕ ಚಿಂತನೆಗೆ ವೇಗ ನೀಡಲಿದೆ ಎಂದರು.





















































 
 

ಪ್ರಗತಿ ಆಸ್ಪತ್ರೆಯ ಡಾ.ಶ್ರೀಪತಿ ರಾವ್‍ ಮಾತನಾಡಿ, ಈ ಸಪ್ತಾಹದ ಪ್ರಯೋಜನಗಳನ್ನು ಪಡೆದು ಶ್ರೀ ಕೃಷ್ಣನ ಕೃಪೆಗೆ ಪಾತ್ರರಾಗಬೇಕು. ಈ ಸಪ್ತಾಹದ ನಂತರವೂ ಕೃಷ್ಣನ ಜಪ ಮುಂದುವರಿಯಬೇಕು ಎಂದರಲ್ಲದೆ, ತಾಳ್ಮೆ, ಶ್ರದ್ದೆ ಇದ್ದರೆ ಯಾವುದೇ ಸಾಧನೆ ಮಾಡಲು ಸಾಧ್ಯ ಎಂದು ಕಥಾರೂಪದಲ್ಲಿ ವಿವರಿಸಿದರು.

ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಧರ್ಮ, ದೇವರ ಬಗ್ಗೆ ಆಹಾರ ಜ್ಞಾನ ಹಡೆದ ಡಾ.ಬೆ.ನಾ.ವಿಜಯೀಂದ್ರ ಆಚಾರ್ಯ ಮೈಸೂರುರವರು ಈ ಸಪ್ತಾಹ ನಡೆಸುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳನ್ನು ಇತರ ಕಡೆಗಳಲ್ಲಿಯೂ ನಡೆಸಬೇಕಿದೆ. ರೀತಿಯ ಕಾರ್ಯಕ್ರಮಗಳು ಆದಾಗ ಮೋಕ್ಷದೆಡೆಗೆ ಸಾಗಬಹುದು ಎಂದರು.

ಜ್ಯೋತಿಷ್ಯ ವೇ.ಮೂ. ವಿಶ್ವಮೂರ್ತಿ ಬಡೆಕ್ಕಿಲ್ಲಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಳ್ಳಿ ಸಂಪದ ಪುತ್ತೂರು ತಾಲೂಕು ಅಧ್ಯಕ್ಷ ಸುಧೀಂದ್ರ ಉಪಸ್ಥಿತರಿದ್ದರು. ಅಭಿಸ್ಟ್ ರಾವ್ ದಾಳಿಂಬ ಪ್ರಾರ್ಥಿಸಿದರು. ಶಿವಳ್ಳಿ ಸಂಪದ ಬೊಳುವಾರು ವಲಯದ ಅಧ್ಯಕ್ಷ ಗಣೇಶ್ ಕೆದಿಲಾಯ ಸ್ವಾಗತಿಸಿ, ಕಾರ್ಯದರ್ಶಿ ಹರಿಪ್ರಸಾದ್ ದಾಳಿಂಬ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

error: Content is protected !!
Scroll to Top