ಆಪರೇಷನ್ ಸಿಂಧೂರ್‌ನಲ್ಲಿ 150 ಪಾಕ್ ಸೈನಿಕರು ಹತ: ಪಾಕ್ ಟಿವಿ ಮಾಧ್ಯಮದಲ್ಲಿ ವರದಿ

ಇಸ್ಲಾಮಾಬಾದ್: ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಇಸ್ಲಾಮಾಬಾದ್ 150 ಕ್ಕೂ ಅಧಿಕ ಸೈನಿಕರನ್ನು ಕಳೆದುಕೊಂಡಿದೆ ಎಂದು ಪಾಕಿಸ್ತಾನದ ಸಮಾ ಟಿವಿ ವರದಿ ಮಾಡಿದ್ದು, ನಂತರ ಆ ವರದಿಯನ್ನು ಅಳಿಸಿ ಹಾಕಿದೆ.

ಈ ಸುದ್ದಿಯಲ್ಲಿ ಪಾಕ್ ಅಧ್ಯಕ್ಷರು, ಆಪರೇಷನ್ ಬುನ್ಯಾನುನ್ ಮಾರ್ಸೂಸ್ ಸಮಯದಲ್ಲಿ ಧೈರ್ಯ ಮತ್ತು ಸರ್ವೋಚ್ಚ ತ್ಯಾಗಕ್ಕಾಗಿ” ನೀಡಿದ ಶೌರ್ಯ ಪ್ರಶಸ್ತಿಗಳ ಪಟ್ಟಿಯನ್ನು ಸಹ ಒಳಗೊಂಡಿದೆ. ಆಪರೇಷನ್ ಬುನ್ಯಾನುನ್ ಮಾರ್ಸೂಸ್ ಪಾಕ್ ತನ್ನ ವಾಯುನೆಲೆಗಳ ಮೇಲೆ ಭಾರತೀಯ ದಾಳಿಗೆ ಪಾಕಿಸ್ತಾನ ನೀಡಿದ ಪ್ರತೀಕಾರದ ಸಂಕೇತನಾಮ.

155 ಸೈನಿಕರ ಹೆಸರುಗಳನ್ನು ಅವರ ಹೆಸರಿನ ಮುಂದೆ ‘ಶಹೀದ್ (ಹುತಾತ್ಮ) ಎಂದು ಬರೆಯಲಾಗಿದೆ. ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ಪಟ್ಟಿಯಲ್ಲಿ ಇಮ್ತಿಯಾಜಿ ಸನದ್ ಪಡೆದ 146 ಜನರ ಹೆಸರುಗಳಿವೆ. 45 ಸೈನಿಕರಿಗೆ ತಮ್ಘಾ ಇ ಬಸಲಾತ್ ಪ್ರಶಸ್ತಿ ನೀಡಲಾಗಿದೆ. ಈ ಪೈಕಿ ನಾಲ್ವರು ಯೋಧರಿಗೆ ಮರಣೋತ್ತರವಾಗಿ ಈ ಪ್ರಶಸ್ತಿ ಲಭಿಸಿದೆ.





















































 
 
error: Content is protected !!
Scroll to Top