ಪುತ್ತೂರು: ದೃಶ್ಯ ಮೂವೀಸ್ ಅರ್ಪಿಸುವ ಅಜಿತ್ ಬಿಟಿ ನಿರ್ಮಾಣದ, ಕೀರ್ತನ್ ಶೆಟ್ಟಿ ಸುಳ್ಯ ಕಥೆ ಹಾಗೂ ನಿರ್ದೇಶನದ ಹೊಸ ಕಿರುಚಿತ್ರದ ಟೈಟಲ್ ರಿವೀಲ್ ಅನ್ನು ನವರಸರಾಜ ಭೋಜರಾಜ್ ವಾಮಂಜೂರು ಅವರು ಮಾಡಿದರು.
ನನ್ಯ ಅಚ್ಚುತ್ತಾ ಮೂಡತ್ತಾಯ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಈಶ್ವರಮಂಗಲದ ಹನುಮಗಿರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿನಿಮಾದ ವಿತರಕ ಬಾಲಕೃಷ್ಣ ಶೆಟ್ಟಿ, ಪೆನ್ಸಿಲ್ ಬಾಕ್ಸ್ ಚಿತ್ರದ ನಿರ್ದೇಶಕ ರಝಾಕ್ ಪುತ್ತೂರು, ಧರ್ಮಚಾವಡಿ ಚಿತ್ರದ ನಿರ್ಮಾಪಕ ಜಗದೀಶ್ ಅಮೀನ್ ನಡುಬೈಲು ಮತ್ತು ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ, ತೆನ್ಕಾಯಿ ಮಲೆ ಚಿತ್ರದ ನಿರ್ದೇಶಕ ರವಿಚಂದ್ರ ರೈ ಮುಂಡೂರು ಮೊದಲಾದವರು ಉಪಸ್ಥಿತರಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದರು.
ಚಿತ್ರದ ಚಿತ್ರೀಕರಣವು ಕಾವು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದಿದ್ದು ಧರ್ಮ ಚಾವಡಿ ಚಿತ್ರದ ಸಹ ನಿರ್ದೇಶಕ ಕೀರ್ತನ್ ಶೆಟ್ಟಿ ಸುಳ್ಯ ಇವರ ನಿರ್ದೇಶನದ, ಪ್ರಶಾಂತ್ ಶೇಣಿ ಇವರ ಛಾಯಾಗ್ರಹಣ, ಶ್ರೀನಾಥ್ ಪವಾರ್ ಇವರ ಸಂಕಲನ, ಭವಿಷ್ಯತ್ ಇವರ ಹಿನ್ನೆಲೆ ಗಾಯನದಲ್ಲಿ ಮೂಡಿಬಂದಿದೆ. ಚಿತ್ರದ ಸಹ ಬರಹಗಾರರಾಗಿ ಜೈದೀಪ್ ರೈ, ಸುಪ್ರೀತ ಕೆ.ಎಸ್., ಹಿತಶ್ರೀ ಶೆಟ್ಟಿ ಕಾರ್ಯನಿರ್ವಹಿಸಿದ್ದಾರೆ. ಯಶ್ವಿತ್ ಕಾವು ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಪೆನ್ಸಿಲ್ ಬಾಕ್ಸ್ ಚಿತ್ರದ ನಿರ್ಮಾಪಕ ದಯಾನಂದರ ಬೆಟ್ಟಂಪಾಡಿ, ಜೈದೀಪ್ ರೈ
ಕೊರಂಗ, ಸುಪ್ರೀತ ಕೆ.ಎಸ್., ಸುಷ್ಮ ಕೆ.ಎಸ್., ನಿರಂಜನ್ ರಾವ್, ಪ್ರಮೀತ್ ರಾಜ್, ಹರ್ಷಿತ್ ಅರ್ಭಟ್ಕ, ಸೌಪರ್ಣಿಕಾ ರೈ ಹಾಗೂ ಸುಮಾರು 15 ಬಾಲ ಕಲಾವಿದರು ಅಭಿನಯಿಸಿದ್ದಾರೆ.
























