ಧರ್ಮಸ್ಥಳ ಪ್ರಕರಣ : ಊಹಾಪೋಹದ ವಿಡಿಯೋಗಳನ್ನು ಹರಿಯಬಿಟ್ಟವರಿಗೆ ಎಸ್​ಐಟಿ ನೋಟಿಸ್

ಸೋಷಿಯಲ್‌ ಮೀಡಿಯಾ ವಿಡಿಯೋಗಳ ತೀವ್ರ ಪರಿಶೀಲನೆ

ಧರ್ಮಸ್ಥಳ : ಧರ್ಮಸ್ಥಳ ಪ್ರಕರಣ ಸಂಬಂಧ ಕಳೆದ ಒಂದೂವರೆ ತಿಂಗಳಿನಿಂದ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿದ ಸಾವಿರಾರು ಎಲ್ಲ ವಿಡಿಯೋಗಳನ್ನು ಎಸ್​ಐಟಿ ಸಂಗ್ರಹಿಸಿ ಪರಿಶೀಲಿಸುತ್ತಿದೆ. ಸೋಶಿಯಲ್ ಮೀಡಿಯಾವನ್ನು ಸಂಪೂರ್ಣವಾಗಿ ಮಾನಿಟರ್ ಮಾಡಲಾಗುತ್ತಿದ್ದು ಎಲ್ಲರ ಮೇಲೂ ಎಸ್‌ಐಟಿ ಕಣ್ಣಿಟ್ಟಿದೆ.

ಧರ್ಮಸ್ಥಳ ಪ್ರಕರಣ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ಊಹಾಪೋಹದ ವಿಡಿಯೋಗಳನ್ನು ಹರಿಯಬಿಟ್ಟವರಿಗೆ ಎಸ್​ಐಟಿ ನೋಟಿಸ್ ನೀಡಲು ಆರಂಭಿಸಿದೆ. ಈ ಸಂಬಂಧ ವಿಶೇಷ ತಂಡ ರಚಿಸಿರುವ ಎಸ್​​ಐಟಿ, ತನಿಖೆ ಕುರಿತು ಬಾಯಿಗೆ ಬಂದಂತೆ ಮಾತನಾಡಿದವರ ಪಟ್ಟಿ ರೆಡಿ ಮಾಡಿಕೊಂಡಿದೆ.





















































 
 

ಇದರ ಜೊತೆಗೆ ಸುಜಾತ ಭಟ್‌ ಪ್ರಕರಣದ ತನಿಖೆಯನ್ನೂ ಪ್ರಾರಂಭಿಸಿದೆ. ತನ್ನ ಮಗಳು ಅನನ್ಯಾ ಭಟ್ ಮಣಿಪಾಲದಲ್ಲಿ ವೈದ್ಯಕೀಯ ಶಿಕ್ಷಣ ಓದುತ್ತಿದ್ದಾಗ ಧರ್ಮಸ್ಥಳಕ್ಕೆ ತೆರಳಿದ ನಂತರ ನಾಪತ್ತೆಯಾಗಿದ್ದಾಳೆ, ಅವಳನ್ನು ಹುಡುಕಿಕೊಡಿ ಎಂದು ಸುಜಾತ ಭಟ್‌ ಎಂಬ ವೃದ್ಧೆ ಆಗ್ರಹಿಸುತ್ತಿದ್ದಾರೆ. ಆಕೆಯನ್ನು ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು ಎಂಬ ಆರೋಪಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಳೆದ ಕೆಲವು ದಿನಗಳಿಂದ ಮುನ್ನೆಲೆಗೆ ಬಂದಿತ್ತು. ಈ ವಿಚಾರವಾಗಿ ಸುಜಾತಾ ಭಟ್ ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ ಅನನ್ಯಾ ಭಟ್ ಎಂಬಾಕೆ ಇರಲೇ ಇಲ್ಲ. ಮಣಿಪಾಲದಲ್ಲಿ ಆಕೆ ಶಿಕ್ಷಣ ಪಡೆದಿದ್ದಕ್ಕೆ ದಾಖಲೆಗಳಿಲ್ಲ ಎಂದು ಮತ್ತೊಂದು ಗುಂಪು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕ್ಷಿಗಳನ್ನಿಟ್ಟು ವಾದಿಸುತ್ತಿದೆ.

ಅನನ್ಯಾ ಭಟ್ ನಾಪತ್ತೆ ಆರೋಪ​ದ ಹಿನ್ನೆಲೆಯಲ್ಲಿ ಎಸ್​​ಐಟಿ ಸಿಪಿಐ ಮಂಜುನಾಥ್ ಗೌಡ ನೇತೃತ್ವದ ತಂಡ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್​ಪೇಟೆಗೆ ತೆರಳಿ ಮಾಹಿತಿ ಕಲೆ ಹಾಕಿದೆ. ಸುಜಾತಾ ಭಟ್ 1999ರಿಂದ 2007ರವರೆಗೆ ರಿಪ್ಪನ್​ಪೇಟೆಯಲ್ಲಿ ವಾಸವಾಗಿದ್ದಾರೆ ಎನ್ನಲಾಗಿದೆ. ಧರ್ಮಸ್ಥಳ ಪ್ರಕರಣದಲ್ಲಿ ಸುಜಾತಾ ಭಟ್ ಪಾತ್ರವೇನು? ನಿಜವಾಗಿಯೂ ಅವರಿಗೆ ಮಗಳಿದ್ದರೇ? ಅನನ್ಯಾ ಭಟ್ ಹಿನ್ನೆಲೆ ಏನು ಎಂಬ ಬಗ್ಗೆ ಎಸ್​ಐಟಿ ಮಾಹಿತಿ ಕಲೆ ಹಾಕಿದೆ.

error: Content is protected !!
Scroll to Top