ಧರ್ಮಸ್ಥಳ ಪ್ರಕರಣದ ಹಿಂದೆ ಸೆಂಥಿಲ್‌ ಕೈವಾಡ : ಯಶ್‌ಪಾಲ್‌ ಸುವರ್ಣ ಆರೋಪ

ಕಾಂಗ್ರೆಸ್‌ ಸಂಸದನನ್ನು ತನಿಖೆಗೆ ಒಳಪಡಿಸಲು ಆಗ್ರಹ

ಮಂಗಳೂರು: ಧರ್ಮಸ್ಥಳದ ಬುರುಡೆ ಪ್ರಕರಣದ ಅನಾಮಿಕನ ಹಿಂದೆ ಕಾಂಗ್ರೆಸ್‌ ಸಂಸದ ಶಶಿಕಾಂತ್‌ ಸೆಂಥಿಲ್‌ ಇದ್ದಾರೆ ಎಂದು ಉಡುಪಿಯ ಬಿಜೆಪಿ ಶಾಸಕ ಯಶ್‌ಪಾಲ್‌ ಸುವರ್ಣ ಸ್ಫೋಟಕ ಆರೋಪ ಮಾಡಿದ್ದಾರೆ.

ಧರ್ಮಸ್ಥಳ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಈ ಷಡ್ಯಂತ್ರ ಮಾಡಿದವರ ಮೂಲಕ್ಕೆ ಹೋಗಬೇಕು. ದಕ್ಷಿಣ ಕನ್ನಡದ ಮಾಜಿ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಅವರನ್ನು ತನಿಖೆಗೆ ಒಳಪಡಿಸಿದರೆ ಸತ್ಯ ಸಂಗತಿ ಬಯಲಾಗಲಿದೆ. ಅಂದು ಬ್ರಿಟಿಷರು ಬಂದು ಹಿಂದೂಗಳನ್ನು ಒಡೆದು ಆಳಿದ್ದರು. ಈಗ ಕಮ್ಯೂನಿಸ್ಟರು ಹಿಂದೂ ಸಮಾಜದ ಒಳಗೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ದಬ್ಬಾಳಿಕೆ ಮಾಡಿ ಹಿಂದೂಗಳನ್ನು ಒಡೆಯಲು ಮುಂದಾಗುತ್ತಿದ್ದಾರೆ ಎಂದರು.





















































 
 

ದೇವರ ಸ್ಮರಣೆಯಿಂದ ನಮ್ಮ ದಿನ ಆರಂಭವಾಗುತ್ತದೆ. ಮತಬ್ಯಾಂಕ್‌ಗಾಗಿ ಕಾಂಗ್ರೆಸ್‌ ರಾಜಕೀಯ ಮಾಡುತ್ತಿದೆ. ಈ ಷಡ್ಯಂತ್ರಕ್ಕೆ ಮುಂದಿನ ದಿನಗಳಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ. ಗೃಹ ಸಚಿವರು ಸದನದಲ್ಲಿ ರಾಜಕೀಯ ಬಿಟ್ಟು ಸರಿಯಾದ ಉತ್ತರ ನೀಡಲಿ. ಧರ್ಮದ ವಿರುದ್ಧದ ಅವಹೇಳನ, ಷಡ್ಯಂತ್ರವನ್ನು ನಾವು ಸಹಿಸುವುದಿಲ್ಲ. ಮಂಜುನಾಥ ಸ್ವಾಮಿ ಎಲ್ಲ ಷಡ್ಯತ್ರಗಳಿಗೆ ಉತ್ತರ ಕೊಡುತ್ತಾನೆ ಎಂದು ಹೇಳಿದರು.

ಮುಸುಕುಧಾರಿಯ ಹಿಂದೆ ಇರುವವರಿಗೆ ನೋಟಿಸ್‌

ಈ ನಡುವೆ ತಲೆ ಬುರುಡೆ ಹಿಡಿದುಕೊಂಡು ಬಂದು ನೂರಾರು ಹೆಣಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿರುವ ಅನಾಮಿಕ ಮುಸುಕುಧಾರಿಯ ಬಾಯಿ ಬಿಡಿಸಲು ಎಸ್‌ಐಟಿ ಅಧಿಅಕರಿಗಳು ಪ್ರಯತ್ನಿಸುತ್ತಿದ್ದಾರೆ. ಆತ ನೀಡಿರುವ ದೂರು ಸುಳ್ಳು ಎಂಬ ನಿರ್ಧಾರಕ್ಕೆ ಬಂದ ಎಸ್‌ಐಟಿ ಅಧಿಕಾರಿಗಳು ಆತನನ್ನೇ ವಶಕ್ಕೆ ಪಡೆದು ವಿಚಾರಣೆ ನಡೆಸಲು ಪ್ಲಾನ್ ಮಾಡಿದ್ದಾರೆ. ಆತನ ಹಿಂದೆ ಯಾರೋ ಇದ್ದು ಇದನ್ನೆಲ್ಲ ಮಾಡಿಸಿದ್ದಾರೆ ಎಂಬ ಅನುಮಾನ ಬಂದಿದ್ದು ಹಲವು ವ್ಯಕ್ತಿಗಳಿಗೆ ನೋಟಿಸ್‌ ನೀಡಿ ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಮುಸುಕುಧಾರಿ ವ್ಯಕ್ತಿ ಆರಂಭದಲ್ಲಿ ನ್ಯಾಯಾಲಯಕ್ಕೆ ಹಾಜರು ತಂದ ತಲೆಬುರುಡೆಯ ತನಿಖೆಯನ್ನೂ ಅಧಿಕಾರಿಗಳು ಮುಂದುವರಿಸಿದ್ದಾರೆ. ಈ ತಲೆ ಬುರುಡೆ ಪುರುಷನದ್ದು ಎಂದು ತನಿಖೆ ವೇಳೆ ಬಹಿರಂಗಗೊಂಡಿದ್ದು ಈಗ ಆ ತಲೆ ಬುರುಡೆಯ ಮಹಜರು ನಡೆಸಲು ಎಸ್‌ಐಟಿ ತಯಾರಿ ನಡೆಸಿದೆ.

error: Content is protected !!
Scroll to Top