ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಇದರ ಸಾಪ್ತಾಹಿಕ ಸಭೆಯಲ್ಲಿ ಪ್ರಧಾನ ಉಪನ್ಯಾಸ ನೀಡಿದ ಸೀತಾರಾಮ ಕೇವಳ ಇವರು ‘ರಾಷ್ಟ್ರೀಯ ಭಾವೈಕ್ಯತೆ’ ವಿಚಾರವಾಗಿ ವಿಶೇಷ ಉಪನ್ಯಾಸ ನೀಡಿದರು. ಪಠ್ಯಕ್ಕೆ ಸೀಮಿತಾವಾಗಿರದೆ ರಾಷ್ಟ್ರೀಯ ಭಾವೈಕ್ಯತೆ ಎಂಬುದು ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಮಹತ್ವದ ಸಂಗತಿ ಎಂದ ಅವರು ನಂಬಿಕೆ ಆತ್ಮೀಯತೆ ಮತ್ತು ಸಹಿಷ್ಣುತೆ ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳಬಹುದಾದ ಅತ್ಯಂತ ಮಹತ್ವದ ಸಂಗತಿಗಳು ಎಂದು ಅಭಿಪ್ರಾಯ ಪಟ್ಟರು.
ಸಭಾಧ್ಯಕ್ಷತೆಯನ್ನು ವಹಿಸಿದ ಕ್ಲಬ್ಬಿನ ಅಧ್ಯಕ್ಷ Rtn Dr. ಶ್ರೀಪ್ರಕಾಶ್ ಬಂಗಾರಡ್ಕ ಅವರು ಸ್ವಾತಂತ್ರ್ಯೋತ್ಸವ ಮತ್ತು ಕೃಷ್ಣ ಜನ್ಮಾಷ್ಟಮಿಯ ಶುಭಾಶಯ ಕೋರಿದರು. Annet ಆರಾಧನಾ ಶ್ರೀಪ್ರಕಾಶ್ ಪ್ರಾರ್ಥಿಸಿದರು, Rtn. ಸತೀಶ್ ತುಂಬ್ಯ ಅತಿಥಿಯವರನ್ನು ಪರಿಚಯಿಸಿ ದರು.
ದಿವಂಗತರಾದ Rtn ರಂಜನ್ ಕಿಣಿ ಇವರ ಸಂಸ್ಮರಣೆ ಮಾಡಿ ಶ್ರದ್ಧಾಂಜಲಿ ಸಮರ್ಪಿಸಲಾಯಿತು.
ರೋಟರಿ ಮಾಹಿತಿ ಕಾರ್ಯಕ್ರಮ(RIT) ಇದರ ಭಾಗವಾಗಿ ಪೂರ್ವ ಅಧ್ಯಕ್ಷರಾದ Rtn. ಬಲರಾಮ ಆಚಾರ್ಯರು “Rotary partners with symbiosis International University to established Centre in India” ವಿಷಯವಾಗಿ ಮಾಹಿತಿ ನೀಡಿದರು. Rtn ಜೈ ರಾಜ್ ಭಂಡಾರಿ ಪಟ್ಲ ಫೌಂಡೇಶನ್ ಯಕ್ಷಗಾನದ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ನಿಕಟ ಪೂರ್ವ ಅಧ್ಯಕ್ಷ Rtn ಶ್ರೀಪತಿ ರಾವ್ ನಿಯೋಜಿತ ಅಧ್ಯಕ್ಷ Rtn. ದತ್ತಾತ್ರೇಯ ರಾವ್ ಹಾಗೂ ಕಾರ್ಯದರ್ಶಿ Rtn. ಸುಬ್ಬಪ್ಪ ಕೈಕಂಬ ಉಪಸ್ಥಿತರಿದ್ದರು. Rtn. Dr ಸುಧಾ ಎಸ್. ರಾವ್ ಧನ್ಯವಾದ ಸಮರ್ಪಿಸಿದರು.
























