ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಗೆ 2025/26 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಸುಭದ್ರ ಬಳಿ ಇರುವ ಟ್ರಸ್ಟಿನ ಕೇಂದ್ರ ಕಚೇರಿಯಲ್ಲಿ ನಡೆಯಿತು.
ಟ್ರಸ್ಟಿನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರ ಉಪಸ್ಥಿತಿಯಲ್ಲಿ, ಪ್ರಸ್ತುತ ಅಧ್ಯಕ್ಷ ಮಹೇಂದ್ರ ವರ್ಮ ಬಜತ್ತೂರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು, ಟ್ರಸ್ಟಿನ ನೂತನ ಅಧ್ಯಕ್ಷರಾಗಿ ಶ್ರೀರಾಮ್ ಭಟ್ ಪಾತಾಳ, ಪ್ರಧಾನ ಕಾರ್ಯದರ್ಶಿಯಾಗಿ ಪ್ರೇಮ್ ರಾಜ್ ಅರ್ಲಪದವು, ಕೋಶಾಧಿಕಾರಿಯಾಗಿ ರೂಪೇಶ್ ನಾಯ್ಕ್ ಟಿ. ಪುತ್ತೂರು ಅವರನ್ನು ನಿರ್ದೇಶಕರುಗಳ ಸಮ್ಮುಖದಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಟ್ರಸ್ಟಿನ ಗೌರವಾಧ್ಯಕ್ಷ ಚಂದಪ್ಪ ಮೂಲ್ಯ, ಮಾಜಿ ಅಧ್ಯಕ್ಷ ಪ್ರಸನ್ನ ಮಾರ್ತ, ಮಾಜಿ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ಕೋಶಾಧಿಕಾರಿ ಗಣೇಶ್ ಚಂದ್ರ ಭಟ್ ಮಕರಂದ, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರೈ ಕೆದಂಬಾಡಿ ಮಠ ಉಪಸ್ಥಿತರಿದ್ದರು ಸಭೆಯಲ್ಲಿ ಕೊನೆಯಲ್ಲಿ ಟ್ರಸ್ಟಿನ 2024/-925ನೆ ಸಾಲಿನಲ್ಲಿ ಟ್ರಸ್ಟ್ ನ್ನ ಮುನ್ನಡೆಸಿದ ಅಧ್ಯಕ್ಷರಿಗೆ, ಪ್ರದಾನ ಕಾರ್ಯದರ್ಶಿ ಗೆ ಹಾಗೂ ಕೋಶಾಧಿಕಾರಿ ತಮ್ಮ ಒಂದು ವರ್ಷದ ಅವಿಸ್ಮರಣೀಯ ಸೇವೆಗೆ ಸಂಚಾಲಕರು ಶಾಲು ಹಾಕಿ ಗೌರವಾರ್ಪಣೆ ಮಾಡಿದರು.
ರವಿಕುಮಾರ್ ರೈ ಸ್ವಾಗತಿಸಿ. ಮಾದ್ಯಮ ಪ್ರಮುಖ ನವೀನ್ ರೈ ಪಂಜಳ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
























