ಪುತ್ತೂರು: ಉರ್ಲಾಂಡಿ ನಿವಾಸಿ ಅವಿವಾಹಿತೆಯೋರ್ವರು ಆ.15ರಂದು ಮಧ್ಯಾಹ್ನ ಮನೆಯಂಗಳದ ಬಾವಿಗೆ ಬಿದ್ದು ಮೃತಪ್ಪಟಿರುವ ಘಟನೆ ನಡೆದಿದೆ. ಉರ್ಲಾಂಡಿ ನಿವಾಸಿ ಶೇಖರ್ ಅವರ ಸಹೋದರಿ ಆರ್.ಗೀತಾ (59) ಮೃತರು.
ಗೀತಾ ಅವರು ಹಲವು ವರ್ಷಗಳಿಂದ ಮಾನಸಿಕ ಅಸ್ವಸ್ಥೆಯಾಗಿದ್ದು, ಔಷಧಿ ಪಡೆಯುತ್ತಿದ್ದರು. ಸಹೋದರ ಶೇಖರ್ ಅವರ ಮನೆಯಲ್ಲಿ ವಾಸ್ತವ್ವ ಹೊಂದಿದ್ದು, ಆ.15ರಂದು ಮಧ್ಯಾಹ್ನ ಊಟ ಮಾಡಿದ್ದರು. ಬಳಿಕ ಅವರು ಮನೆಯಂಗಳದ ಬಾವಿಗೆ ಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ.
ಮೃತರು ಸಹೋದರರಾದ ಸೆಲೂನ್ನ ಮಾಲಕ ಶೇಖರ್, ತಂಕರ್, ಸುರೇಶ್, ಸಹೋದರಿಯರಾದ ಆರ್. ವಿಜಯಾ, ಸರಸ್ವತಿರನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಪುತ್ತೂರು ನಗರ ಠಾಣಾ ಪೊಲೀಸರು ತೆರಳಿ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
























