ರಸ್ತೆ ಬದಿ ನಿಂತಿದ್ದ  ಕಾರಿಗೆ ಲಾರಿ ಡಿಕ್ಕಿ

ಕುಂದಾಪುರ: ತೆಕ್ಕಟ್ಟೆಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ ತೆಕ್ಕಟ್ಟೆ ಉದ್ಯಮಿ ಮತ್ತು ಅವರ ಮಗ ನಿಂತಿದ್ದ ಇನ್ನೋವಾ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ. ಇಬ್ಬರೂ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ತೆಕ್ಕಟ್ಟೆಯ ಶ್ರೀ ಗಣೇಶ್ ಸಿಲ್ಕ್ ನ ವ್ಯವಸ್ಥಾಪಕ ನಿರ್ದೇಶಕ ಅನಂತ್ ನಾಯಕ್ (57) ಮತ್ತು ಅವರ ಮಗ ಅನೂಪ್ ನಾಯಕ್ (23) ರವರು ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನಕ್ಕೆ ಭಜನತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ತಮ್ಮ ಇನೋವಾ ಕಾರಿನಲ್ಲಿ ತೆರುತಿದ್ದು, ತಮ್ಮ ಜೊತೆ ದೇವಸ್ಥಾನಕ್ಕೆ ಬರುವ ಇನ್ನೋರ್ವ ವ್ಯಕ್ತಿಗಾಗಿ ಕಾರನ್ನು ರಸ್ತೆ ಬದಿಯಲ್ಲಿ ಪಾರ್ಕಿಂಗ್ ಮಾಡಿ ಕಾಯುತ್ತಿದ್ದರು.

ಆ ಸಂದರ್ಭದಲ್ಲಿ ಪುಣೆಯಿಂದ ಮಂಗಳೂರಿಗೆ ಈರುಳ್ಳಿ ಸಾಗಿಸುತ್ತಿದ್ದ ಲಾರಿ ಇನ್ನೋವಾ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದು ವಾಹನಕ್ಕೆ ತೀವ್ರ ಹಾನಿಯಾಯಿತು. ಪುಣೆಯಿಂದ ಮಂಗಳೂರಿಗೆ ಈರುಳ್ಳಿ ಸಾಗಿಸುತ್ತಿದ್ದ ಲಾರಿ ಇನ್ನೋವಾ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ವಾಹನಕ್ಕೆ ತೀವ್ರ ಹಾನಿಯಾಗಿದ್ದು, ಅಪಘಾತದ ಸಮಯದಲ್ಲಿ ಇಬ್ಬರೂ ಸೀಟ್ ಬೆಲ್ಟ್ ಧರಿಸಿದ್ದರಿಂದ ಯಾವುದೇ ಗಾಯಗಳಿಲ್ಲದೆ ಪ್ರಾಣಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಕೋಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.





















































 
 

error: Content is protected !!
Scroll to Top